April 5, 2025

Bhavana Tv

Its Your Channel

ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಾಗಾರ

ಮಂಡ್ಯ; ಜಿಲ್ಲೆಯ ಕೆ.ಆರ್.ಪೇಟೆ: ಪಟ್ಟಣದ ಹಾಲು ಒಕ್ಕೂಟದ ವತಿಯಿಂದ ಕುರಿಯನ್ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಾಗಾರವನ್ನು ಮನ್ ಮುಲ್ ಹಿರಿಯ ನಿರ್ದೇಶಕರಾದ ಡಾಲು ರವಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿಅವರು ಹಾಲು ಉತ್ಪಾದಕರ ಸಮಗ್ರ ಅಭಿವೃದ್ದಿಯಲ್ಲಿ ಸಂಘ ಕಾರ್ಯದರ್ಶಿ ಗಳ ಪಾತ್ರ ಅಪಾರವಾಗಿದೆ. ಕಾರ್ಯದರ್ಶಿಗಳು ಸಂಘದ ಆಡಳಿತ ಮಂಡಳಿ ಹಾಗೂ ನೌಕರರ ನಡುವೆ ಸಮನ್ವಯತೆ ಸಾಧಿಸಿಕೊಂಡು ಸಂಘವನ್ನು ಮುನ್ನಡೆಸುವ ಹೆಚ್ಚಿನ ಜವಾಬ್ದಾರಿ ಇರುತ್ತದೆ.
ಸಂಘವು ಉತ್ತಮವಾಗಿ ನಡೆಯಬೇಕಾದರೆ ಮೊದಲು ಗುಣಮಟ್ಟದ ಹಾಲು ಸಂಗ್ರಹಿಸಬೇಕು. ಹಾಲು ಪರೀಕ್ಷಕರ ಹಾಗೂ ಸಹಕಾರ ಕೆಲಸಗಳನ್ನು ಗಮನಿಸುತ್ತಿರಬೇಕು. ಹಾಲಿನ ಗುಣಮಟ್ಟ ಪರೀಕ್ಷೆಯಲ್ಲಿ ತಾವೇ ಖುದ್ದು ವೀಕ್ಷಣೆ ಮಾಡಬೇಕು. ಇದರಲ್ಲಿ ಬೇಜವಬ್ದಾರಿ ತೋರಬಾರದು. ಜಾಗರೂಕರಾಗಿರಬೇಕು.
ಸಂಘದ ಲೆಕ್ಕಪತ್ರಗಳನ್ನು ಕರಾರುವಕ್ಕಾಗಿ ನಿರ್ವಹಣೆ ಮಾಡಬೇಕು. ಸಂಘದಲ್ಲಿ ಏನೇ ಲೋಪವಾದರೂ ಕಾರ್ಯದರ್ಶಿಗಳೆ ಮೊದಲ ಜವಾಬ್ದಾರಿ ಯುತ ವ್ಯಕ್ತಗಳಾಗುತ್ತಾರೆ ಆದ್ದರಿಂದ ಸಂಘದ ಕಾರ್ಯದರ್ಶಿ ಗಳು ಪ್ರಾಮಾಣಿಕತೆ ಹಾಗೂ ಅರ್ಪಣಾ ಭಾವನೆಯಿಂದ ಕೆಲಸ ಮಾಡಬೇಕು ಎಂದು ಡಾಲು ರವಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿಮಂಡ್ಯ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಒಕ್ಕೂಟದ ನಿರ್ದೇಶಕ ರಾದ ಎಚ್.ಟಿ.ಮಂಜುನಾಥ್ ,ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಕೆ.ಜಿ.ತಮ್ಮಣ್ಣ,ರವಿಕುಮಾರ್, ಮನ್‌ಮುಲ್ ಉಪ ವ್ಯವಸ್ಥಾಪಕ ಮೋಹನ್, ಸಂಘಕ್ಕೆ ಒಕ್ಕೂಟಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ತರಬೇತುದಾರ ರಾದ ಪ್ರಸಾದ್, ಆಹಾರ ಸುರಕ್ಷತಾ ನಿಯಮಗಳ ಬಗ್ಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಬಸವರಾಜು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮಾರ್ಗದ ವಿಸ್ತರಣಾಧಿಕಾರಿಗಳಾದ ಎಸ್.ಡಿ.ರಮೇಶ್‌ಕುಮಾರ್, ಮಧುಶಂಕರ್, ಭವ್ಯ ಹಾಗೂ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.


ವರದಿ: ಪೃಥ್ವಿ ಕಿಕ್ಕೇರಿ.

error: