April 5, 2025

Bhavana Tv

Its Your Channel

ಗ್ರಾಮೀಣಕೂಟದ ವತಿಯಿಂದ ಪೌರಕಾರ್ಮಿಕರಿಗೆ ತಹಶೀಲ್ದಾರ್ ಎಂ.ಶಿವಮೂರ್ತಿರಿOದ ಫುಡ್ ಕಿಟ್ ವಿತರಣೆ.


ಮಂಡ್ಯ: ಕೃಷ್ಣರಾಜಪೇಟೆ ಪುರಸಭೆಯ ಪೌರಕಾರ್ಮಿಕರಿಗೆ ಗ್ರಾಮೀಣಕೂಟ ಕ್ರೆಡಿಟ್ ಕೋಆಪರೇಟಿವ್ ಫೈನಾನ್ಸಿಯಲ್ ಸರ್ವೀಸಸ್ ವತಿಯಿಂದ ಉಚಿತವಾಗಿ ಫುಡ್ ಕಿಟ್ ಗಳನ್ನು ವಿತರಿಸಲಾಯಿತು. ಕಳೆದ ಮೂರು ತಿಂಗಳಿನಿoದ ಕೊರೋನಾ ವಾರಿಯರ್ಸ್ ಆಗಿ ಜೀವದ ಹಂಗುತೊರೆದು ಕೆಲಸ ಮಾಡಿರುವ ಪೌರಕಾರ್ಮಿಕರು ಸಂಕಷ್ಠದಲ್ಲಿದ್ದಾರೆ. ಪೌರಕಾರ್ಮಿಕರ ನೋವಿಗೆ ಸ್ಪಂದಿಸಿ ಹತ್ತಾರು ದಾನಿಗಳು ಹಾಗೂ ಸಂಘಸoಸ್ಥೆಗಳ ಮೂಲಕ ಫುಡ್ ಕಿಟ್ ಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರು ತಾಯಿಯು ಮಕ್ಕಳನ್ನು ಕಾಪಾಡಿ ಜೋಪಾನ ಮಾಡುವಂತೆ ಸೇವೆ ಮಾಡಿದ್ದಾರೆ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಆರೋಗ್ಯಪರಿವೀಕ್ಷಕ ಅಶೋಕ್, ಮುಖ್ಯಾಧಿಕಾರಿ ಸತೀಶ್ ಕುಮಾರ್, ಸದಸ್ಯರಾದ ಕೆ.ಸಿ.ಮಂಜುನಾಥ್, ಕೆ.ಆರ್.ರವೀಂದ್ರಬಾಬು, ಶುಭಾಗಿರೀಶ್, ಹೆಚ್.ಎನ್.ಪ್ರವೀಣ್, ಡಿ.ಪ್ರೇಮಕುಮಾರ್, ಉಮೇಶ್, ಗ್ರಾಮೀಣಕೂಟದ ವಲಯ ವ್ಯವಸ್ಥಾಪಕ ಎಂ.ಬೀರಾಜು, ಕೃಷ್ಣರಾಜಪೇಟೆ ಬ್ರಾಂಚ್ ಮ್ಯಾನೇಜರ್ ಯತೀಶ್, ಲೆಕ್ಕಾಧಿಕಾರಿ ಶಿವಕುಮಾರ್, ಪರಿಸರ ಅಭಿಯಂತರ ರಕ್ಷಿತ್ ಗೌಡ, ಕೆ.ಎನ್.ಶಾರದಾ, ಮಂಟೇಮoಜು, ಗ್ರಾಮೀಣಕೂಟದ ಸಿಬ್ಬಂಧಿಗಳು ಮತ್ತಿತರರು ಉಪಸ್ಥಿತರಿದ್ದರು…

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ .

error: