December 20, 2024

Bhavana Tv

Its Your Channel

ಜುಲೈ-೨೯ರ ಬೆಳಿಗ್ಗೆ ೧೦ಕ್ಕೆ ಕೃಷ್ಣರಾಜಪೇಟೆ ಪುರಸಭೆಯ ನೂತನ ಕಾರ್ಯಾಲಯದ ಉದ್ಘಾಟನೆಗೆ ಭರದ ಸಿದ್ಧತೆ.

ಮಂಡ್ಯ: ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರಿಂದ ಪುರಸಭೆಯ ಖಾಸಿಂಖಾನ್ ಸಮುದಾಯ ಭವನದಲ್ಲಿ ಆರಂಭವಾಗುತ್ತಿರುವ ಸುಸಜ್ಜಿತ ಕಾರ್ಯಾಲಯ ಜನತೆಯ ಸೇವೆಗೆ ಸಮರ್ಪಣೆಯಾಗುತ್ತಿದೆ.

ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿಷ್ಕಿಂದೆಯAತಹ ಶಿಥಿಲವಾದ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪುರಸಭೆ ಕಛೇರಿಗೆ ಕೊನೆಗೂ ಮುಕ್ತಿದೊರೆತಿದ್ದು ಸುಸಜ್ಜಿತವಾದ ಕಟ್ಟಡದಲ್ಲಿ ಕಾರ್ಯಾರಂಭ ಮಾಡುತ್ತಿದೆ.. ನೂತನ ಪುರಸಭೆ ಕಾರ್ಯಾಲಯವು ಸುಸಜ್ಜಿತವಾದ ಆರಂಭವಾಗುತ್ತಿರುವುದಕ್ಕೆ ಪಟ್ಟಣದ ಜನತೆಯಲ್ಲಿ ಸಂತಸ ವ್ಯಕ್ತವಾಗುತ್ತದೆ. ಕೆ.ಆರ್.ಪೇಟೆ ಪುರಸಭೆಯ ಕಟ್ಟಡದಲ್ಲಿ ಕಾರ್ಯಾಲಯದ ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮನವಿ ಮಾಡಿದ್ದಾರೆ.

ವರದಿ ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: