December 22, 2024

Bhavana Tv

Its Your Channel

ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಗಾರರಿಂದ 50ಸಾವಿರ ರೂಪಾಯಿ ಬೆಲೆ ಬಾಳುವ ಎರಡು ವಾಷಿಂಗ್ ಮೆಷೀನ್ ಕೊಡುಗೆ

ಕೃಷ್ಣರಾಜಪೇಟೆ ; ತಾಲ್ಲೂಕಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಹೈಟೆಕ್ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಹಿನ್ನೆಲೆಯಲ್ಲಿ ದಾನಿಗಳಿಂದ ತಾಲ್ಲೂಕು ಆಡಳಿತವು ನೆರವನ್ನು ಬಯಸಿದೆ. ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಕೋವಿಡ್ ಆಸ್ಪತ್ರೆಯ ನೋಡೆಲ್ ವೈದ್ಯಾಧಿಕಾರಿ ಡಾ.ಶಿವಪ್ಪ ಹಾಗೂ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಅವರು ಆಸ್ಪತ್ರೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ವರ್ಲ್ ಪೂಲ್ ಕಂಪನಿಯ ವತಿಯಿಂದ ಕೋವಿಡ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ವಾಷಿಂಗ್ ಮೆಷೀನುಗಳನ್ನು ಕಾಣಿಕೆಯಾಗಿ ಸ್ವೀಕರಿಸಿದರು.

ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಚೈತನ್ಯ ಎಲೆಕ್ಟ್ರಾನಿಕ್ಸ್ ಮಾಲೀಕರಾದ ಸುನಿಲ್, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ.

error: