May 4, 2024

Bhavana Tv

Its Your Channel

ಕೆ.ಆರ್.ಪೇಟೆ ಪುರಸಭೆಯ ಸಾಮಾನ್ಯ ಸಭೆ

  • ಕೆ.ಆರ್.ಪೇಟೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ವಿಪಕ್ಷ ಸದಸ್ಯರ ನಡುವೆ ಅಭಿವೃದ್ಧಿ ವಿಚಾರವಾಗಿ ನಡೆದ ವಾಗ್ಯುದ್ಧ
  • ಗೊಂದಲದ ಗೂಡಾದ ಸಾಮಾನ್ಯ ಸಭೆ.. ವಿಪಕ್ಷ ಸದಸ್ಯರಿಂದ ಆರೋಪ, ಆಡಳಿತಾರೂಢ ಸದಸ್ಯರಿಂದ ಪ್ರತ್ಯಾರೋಪ..

ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಕುಮಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗಿ..ಪಟ್ಟಣದ ಸಮಗ್ರವಾದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಕೆಲಸ ಮಾಡಲು ಅಧ್ಯಕ್ಷೆ ಮಹಾದೇವಿ ಮನವಿ …

ನೆನಗುದಿಗೆ ಬಿದ್ದಿರುವ ಪಟ್ಟಣದ ಒಳಚರಂಡಿ ಯೋಜನೆಯನ್ನು ಸಂಪೂರ್ಣಗೊಳಿಸಿ ಜನತೆಯ ಸೇವೆಗೆ ಸಮರ್ಪಿಸಿ ಅನುಕೂಲ ಕಲ್ಪಿಸಿಕೊಡಲು ಸದಸ್ಯರ ಆಗ್ರಹ..ಅಗ್ರಹಾರ ಬಡಾವಣೆ ಹಾಗೂ ಹೇಮಾವತಿ ಬಡಾವಣೆಯ ಒಳಚರಂಡಿ ಪೈಪ್ ಲೈನ್ ಸಂಪೂರ್ಣಗೊಳಿಸಿ ಈ ಭಾಗದ ಜನರಿಗೂ ಅನುಕೂಲ ಮಾಡಿಕೊಡುವಂತೆ ಸದಸ್ಯರಾದ ರವೀಂದ್ರಬಾಬು, ಡಿ.ಪ್ರೇಮಕುಮಾರ್, ಕೆ.ಸಿ.ಮಂಜುನಾಥ್ ಮತ್ತು ಕೆ.ಎಸ್.ಸಂತೋಷ್ ಆಗ್ರಹ..ಮುಂದಿನ ಸಭೆಗೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಕರೆಸಿ ಪಟ್ಟಣದ ಕೆರೆಯ ನೀರು ಕಲುಷಿತವಾಗದಂತೆ ಎಚ್ಚರ ವಹಿಸಿ ವೆಟ್ ವೆಲ್ ನಿರ್ಮಿಸಲು ಸ್ಥಳ ಗುರುತಿಸಲು ಸದಸ್ಯರ ಒಕ್ಕೊರಲ ಆಗ್ರಹಕ್ಕೆ ಮಣಿದ ಅಧ್ಯಕ್ಷೆ ಮಹಾದೇವಿ ಮುಂದಿನ ಸಭೆಗೆ ವಿಷಯ ತಂದು ವೆಟ್ ವೆಲ್ ನಿರ್ಮಾಣಕ್ಕೆ ಜಾಗ ಗುರುತಿಸಲು ಕ್ರಮಕೈಗೊಳ್ಳುವುದಾಗಿ ಸಭೆಗೆ ಭರವಸೆ ನೀಡಿದರು..

ಪಟ್ಟಣದ ವಿವಿಧ ಬಡಾವಣೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜಿಗೆ ಮುಂದಾಗಬೇಕು. ಹೊಸಹೊಳಲು ಗ್ರಾಮದ ವಾರ್ಡ್ ನಂ.೧೯ ಮತ್ತು ೧೮ರಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಿಗೆ ಕ್ರಮಕೈಗೊಳ್ಳುವಂತೆ ಸದಸ್ಯರಾದ ಕೆ.ಬಿ.ಮಹೇಶ್ ಮತ್ತು ಕಲ್ಪನಾದೇವರಾಜ್ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ನಾಮನಿರ್ದೇಶಿತ ಸದಸ್ಯರಾದ ರಾಜ್ಯ ಸರ್ಕಾರದಿಂದ ನೇಮಕಗೊಂಡು ಸಭೆಗೆ ಆಗಮಿಸಿದ ಕೆ.ಆರ್.ನೀಲಕಂಠ, ಕೆ.ಎಸ್.ರಾಜೇಶ್, ತಿಬೆಟ್ ಮಹೇಶ್, ಹನುಮಂತರಾಜ್ ಮತ್ತು ಯಶಸ್ವಿನಿಮಂಜುನಾಥ್ ಅವರನ್ನು ಶಾಲುಹೊದಿಸಿ ಹೂಮಾಲೆ ಹಾಕಿ ಸಭೆಗೆ ಸ್ವಾಗತಿಸಲಾಯಿತು.

ಕೆ.ಆರ್.ಪೇಟೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ಅಗತ್ಯತೆಯ ಆಧಾರದ ಮೇಲೆ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.

ಪುರಸಭೆಯ ಆಡಳಿತ ಮಂಡಳಿಯ ಸದಸ್ಯರಾದ ಹೆಚ್.ಆರ್.ಲೋಕೇಶ್, ಕೆ.ಎಸ್.ಪ್ರಮೋದ್, ಶಾಮಿಯಾನತಿಮ್ಮೇಗೌಡ, ಗಿರೀಶ್, ಪದ್ಮರಾಜು, ಇಂದ್ರಾಣಿವಿಶ್ವನಾಥ, ಶುಭ ಗಿರೀಶ್, ಶೋಭಾದಿನೇಶ್, ಸೌಭಾಗ್ಯ ಉಮೇಶ್, ಹೆಚ್.ಎನ್.ಪ್ರವೀಣ್, ನಟರಾಜ್, ಕೆ.ಬಿ.ಮಹೇಶ್, ಹೆಚ್.ಡಿ.ಅಶೋಕ್, ಖಮ್ಮರಬೇಗಂ, ಸುಗುಣರಮೇಶ್, ಪಂಕಜಾಪ್ರಕಾಶ್ ಭಾಗವಹಿಸಿದ್ದರು…

ಸಹಾಯಕ ಎಂಜಿನಿಯರ್ ಮಧುಸೂದನ್, ಕಂದಾಯಾಧಿಕಾರಿ ರವಿಕುಮಾರ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ, ಪ್ರಥಮದರ್ಜೆ ಸಹಾಯಕರಾದ ರಾಜೇಶ್, ಹೆಚ್.ಪಿ.ನಾಗರಾಜು, ಮಂಜುಳಾ, ಲೆಕ್ಕಾಧಿಕಾರಿ ಚಂದ್ರಕಲಾ, ಸ್ವರ್ಣಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸಮುದಾಯ ಆರೋಗ್ಯ ಸಂಘಟನಾಧಿಕಾರಿ ಭಾರತಿ, ಹಿರಿಯ ಆರೋಗ್ಯ ಪರಿವೀಕ್ಷಕ ಅಶೋಕ್ ಸಭೆಗೆ ಅಗತ್ಯ ಮಾಹಿತಿ ನೀಡಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: