May 4, 2024

Bhavana Tv

Its Your Channel

ಕಳಪೆಯಾಗಿರುವ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ ಬಿ.ಎಂ ಕಿರಣ್ ಅಭಿಮಾನಿ ಬಳಗ

ಕೃಷ್ಣರಾಜಪೇಟೆ ತಾಲ್ಲೂಕಿನ ಯೂಥ್ ಐಕಾನ್ ಬಿ.ಎಂ ಕಿರಣ್ ಅಭಿಮಾನಿ ಬಳಗದ ವತಿಯಿಂದ ಕಳಪೆಯಾಗಿರುವ ಬಸ್ ನಿಲ್ದಾಣವನ್ನು ಸ್ವಚ್ಚಗೊಳಿಸಿ ಬಣ್ಣ ಬಳಿಯುವ ಮೂಲಕ ಮೆರಗು ನೀಡಲಾಯಿತು

ವಿಶ್ವವೇ ಲಾಕ್ ಡೌನ್‌ನಿಂದ ತತ್ತರಿಸಿದ ಸಂದರ್ಭದಲ್ಲಿ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಹಳ್ಳಿ ಹಳ್ಳಿಗಳ ರೈತರ ನೆರವಿಗೆ ನಿಂತು ಪುಡ್ ಕಿಟ್, ಮಾಸ್ಕ್ ಮತ್ತು ಸ್ಯಾನೀಟೇಜರ್ ವಿತರಣೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡೆ, ಬ್ಯಾಗ್ ವಿತರಣೆ ಹಾಗೂ ಕಷ್ಟದಲ್ಲಿದ್ದ ಕುಟುಂಬದಗಳಿಗೆ ಆರ್ಥಿಕ ನೆರವು ನೀಡಿ ಆರೋಗ್ಯ ಮೇಳ ಮಾಡುವ ಮೂಲಕ ನೂರಾರು ಹಿರಿಯ ನಾಗರಿಕರ ನೆರವಿಗೆ ನಿಲ್ಲುವು ಮೂಲಕ ಯೂಥ್ ಐಕಾನ್ ಎಂದೇ ಚಿರ ಪರಿಚಿತವಾಗಿರುವ ಬಿ.ಎಂ ಕಿರಣ್ ರವರು ಮತ್ತೊಂದು ಕಾರ್ಯಕ್ಕೆ ಮಂದಾಗಿದ್ದಾರೆ..

ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮ ಬಸ್ ನಿಲ್ದಾಣ ಸುಮಾರು ದಿನಗಳಿಂದ ಸುಣ್ಣ ಬಣ್ಣ ಕಾಣದೇ ಗಬ್ಬೆದ್ದು ನಾರುತ್ತಿತ್ತು ಆದ್ರೆ ಇದು ಬಿ.ಎಂ ಕಿರಣ್ ರವರ ಗಮನಕ್ಕೆ ಬಂದ ತಕ್ಷಣವೇ ಗ್ರಾಮೋದ್ದಾರಕ ಯೋಜನೆಯನ್ನು ರೂಪಿಸಿಕೊಂಡು ತಮ್ಮ ಅಭಿಮಾನಿಗಳು ತಂಡದೊAದಿಗೆ ಬಸ್ ನಿಲ್ದಾಣಕ್ಕೆ ತಮ್ಮ ಸ್ವಂತ ಖರ್ಚಿನಿಂದ ಬಣ್ಣ ಬಳಿದು ಮೆರೆಗು ತಂದಿದ್ದು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸ್ಥಳಿಯ ಸಾರ್ವಜನಿಕರಿಗೆ ಮನವಿ ಮಾಡಿದರು..

ಬಿ.ಎಂ ಕಿರಣ್ ಅಭಿಮಾನಿಗಳು ಮಾತನಾಡಿ ಪ್ರತಿ ಭಾನುವಾರದೊಂದು ಪ್ರತಿ ಹಳ್ಳಿ ಹಳ್ಳಿಗಳ ಬಸ್ ನಿಲ್ದಾಣ, ಸರ್ಕಾರಿ ಶಾಲಾ ಕಟ್ಟಡ, ನೀರಿನ ಟ್ಯಾಂಕ್ ಗಳನ್ನು ಸ್ವಚ್ಚಗೊಳಿಸಿ ಬಣ್ಣ ಬಳಿದು ಸ್ವಚ್ಚತೆ ಕಾಪಾಡುವುದಾಗಿ ತಿಳಿಸಿದರು ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು..

ಈ ಸಂದರ್ಭದಲ್ಲಿ ಬಿ.ಎಂ ಕಿರಣ್ ಅಭಿಮಾನಿ ಬಳಗಳದ ಹತ್ತಾರು ಯುವಕ ಪಡೆ, ಸಾರ್ವಜನಿಕರು ಭಾಗವಹಿಸಿದರು.
ವರದಿ: ಶಂಭು ಕಿಕ್ಕೇರಿ

error: