May 5, 2024

Bhavana Tv

Its Your Channel

ವಿದ್ಯುತ್ ಕಂಬ ಏರಿ ತಂತಿ ಜೋಡಣೆ ಕೆಲಸ ಮಾಡುತ್ತಿದ್ದ ವೇಳೆ ಕಂಬ ಮುರಿದು ಚೆಸ್ಕಾಂ ಇಲಾಖೆಯ ನೌಕರ ಸಾವು

ಕೆ.ಆರ್.ಪೇಟೆ :- ವಿದ್ಯುತ್ ಕಂಬ ಏರಿ ತಂತಿ ಜೋಡಣೆ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ಆಗಿ ವಿದ್ಯುತ್ ಕಂಬ ಮುರಿದ ಪರಿಣಾಮ ಚೆಸ್ಕಾಂ ಇಲಾಖೆಯ ನೌಕರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯು ನಡೆದಿದೆ .

ಸಂಜೀವ್ ಜಿ ಲಕ್ಕಣ್ಣನವರ್(24) ವಿದ್ಯುತ್ ಕಂಬದಿAದ ಕೆಳಗೆ ಬಿದ್ದು ಮೃತಪಟ್ಟ ನೌಕರರಾಗಿದ್ದಾರೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಹಿರಳಹಳ್ಳಿ ಮುರುಕನಹಳ್ಳಿ ಗ್ರಾಮಗಳ ಮದ್ಯೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಶನಿವಾರ ಬೆಳಿಗ್ಗೆ ಹನ್ನೊಂದು ಗಂಟೆಯ ವೇಳೆಯಲ್ಲಿ ತಂತಿ ಜೋಡಣೆ ಮಾಡುವ ಉದ್ದೇಶದಿಂದ ವಿದ್ಯುತ್ ಕಂಬ ಹತ್ತಿದ ಸಂಜೀವ್ ತಂತಿ ಎಳೆದು ಸಂಪರ್ಕ ಕಲ್ಪಿಸುವ ಸಮಯದಲ್ಲಿ ವಿದ್ಯುತ್ ಕಂಬ ಅರ್ಧಕ್ಕೆ ಮುರಿದು ಬಿದ್ದ ಪರಿಣಾಮ ಸಂಜೀವ್ ವಿದ್ಯುತ್ ಕಂಬದಿAದ ಬಿದ್ದಿದ್ದಾನೆ. ಕೂಡಲೇ ತೀವ್ರವಾಗಿ ಪೆಟ್ಟುಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಸಂಜೀವ್ ಹಲವು ವರ್ಷಗಳಿಂದ ಚೆಸ್ಕಾಂನಲ್ಲಿ ಕಿರಿಯ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆರು ತಿಂಗಳ ಹಿಂದೆ ಸಂಜೀವ್‌ಗೆ ವಿವಾಹವಾಗಿತ್ತು. ಸಂಜೀವ್ ಮೂಲತ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜಮನಕಟ್ಟಿ ಗ್ರಾಮದವರು ಎನ್ನಲಾಗಿದೆ. ಪಟ್ಟಣದ ಚೆಸ್ಕಾಂ ಇಲಾಖೆಯ ವಸತಿಗೃಹದಲ್ಲಿ ವಾಸವಾಗಿದ್ದರು. ಘಟನಾ ಸ್ಥಳಕ್ಕೆ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಿಭಾ, ಎಇಇಗಳಾದ ರಾಜಶೇಖರಮೂರ್ತಿ, ಕೃಷ್ಣ, ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ. ಕಿರಿಯ ವಯಸ್ಸಿನಲ್ಲಿಯೇ ಆಕಸ್ಮಿಕವಾಗಿ ಮರಣಹೊಂದಿದ ಸಂಜೀವ್ ಮೃತದೇಹವನ್ನು ನೋಡಲು ನೂರಾರು ಸಂಖ್ಯೆಯ ಸಹೋದ್ಯೋಗಿಗಳು ಆಗಮಿಸಿ ಸಂತಾಪ ಸಲ್ಲಿಸಿದರು.

ಅವಘಡಕ್ಕೆ ಕಳಪೆ ವಿದ್ಯುತ್ ಕಂಬಗಳೆ ಕಾರಣ :-ವಿದ್ಯುತ್ ಕಂಬ ಮುರಿದುಬೀಳಲು ಕಾರಣವೇನು ಎಂದು ತನಿಖೆ ನಡೆಸಬೇಕು. ಇತ್ತೀಚಿನ ವಿದ್ಯುತ್ ಕಂಬಗಳ ಗುಣಮಟ್ಟ ತುಂಬಾ ಕಳಪೆಯಾಗಿದ್ದು ಕಡಿಮೆ ಕಬ್ಬಿಣ ಸಿಮೆಂಟ್ ಬಳಸುತ್ತಿರುವುದು ಒಂದು ಕಾರಣವಾದರೆ ಸರಿಯಾಗಿ ಕ್ಯೂರಿಂಗ್ ಮಾಡದೆ ಸಿಮೆಂಟ್ ಬಿದ್ದುಹೋಗಿ ಕಂಬದೊಳಗಿನ ಕಬ್ಬಿಣ ಹೊರಗೆ ಕಾಣುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: