May 8, 2024

Bhavana Tv

Its Your Channel

ಗಾಳಿ ಮಳೆಗೆ ತೆಂಗಿನ ಮರಗಳು ಹಾಗೂ ಹತ್ತಾರು ಮನೆಗಳು ಧರೆಗೆ ಉರುಳಿ ಬಿದ್ದು ಹಾನಿ: ಸ್ಥಳಕ್ಕೆ ಅಧಿಕಾರಿಗಳು ಭೇಟಿ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ, ಅಕ್ಕಿಹೆಬ್ಬಾಳು, ಶೀಳನೆರೆ ಹಾಗೂ ಕಸಬಾ ಹೋಬಳಿಯಲ್ಲಿ ಬಿರುಗಾಳಿ ಮಳೆಯ ರುದ್ರನರ್ತನ ನೂರಾರು ತೆಂಗಿನ ಮರಗಳು ಹಾಗೂ ಹತ್ತಾರು ಮನೆಗಳು ಧರೆಗೆ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಠ . ತಹಶೀಲ್ದಾರ್ ರೂಪ, ಜಿಲ್ಲಾಪಂಚಾಯಿತಿ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಸ್ಥಳಕ್ಕೆ ಭೇಟಿ ನೀಡಿದರು.

ಅಂಚನಹಳ್ಳಿ ಗ್ರಾಮದ ಹೊರವಲಯದ ಎಂ.ಹೊಸೂರು ಸರ್ವೇ.ನಂ.9ರ ಎರಡು ಎಕರೆ ತೆಂಗಿನ ತೋಟದಲ್ಲಿ 90ಕ್ಕೂ ಹೆಚ್ಚಿನ ತೆಂಗಿನ ಮರಗಳು ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದ್ದ ವೀರಾಜಮ್ಮ ಅವರಿಗೆ ಸಾಂತ್ವನ ಹೇಳಿ ಊಟ ಮಾಡಿಸಿ ಆತ್ಮವಿಶ್ವಾಸ ತುಂಬಿದ ತಹಶೀಲ್ದಾರ್ ರೂಪ.. ನಾನು ನಿಮ್ಮ ಮಗಳಿದ್ದಂತೆ, ಪ್ರಕೃತಿ ವಿಕೋಪಕ್ಕೆ ಯಾರೂ ಹೊಣೆಯಾಗಲು ಸಾಧ್ಯವಿಲ್ಲ, ಸರ್ಕಾರ ನಿಮ್ಮೊಂದಿಗಿದೆ, ನಾನು ನಿಮಗೆ ಪರಿಹಾರ ದೊರಕಿಸಿಕೊಡುತ್ತೇನೆ ಎಂದು ಆತ್ಮವಿಶ್ವಾಸ ತುಂಬಿ ಸಾಂತ್ವನ ಹೇಳಿ ಸಮಾಧಾನಪಡಿಸಿದರು..

ಅಂಚನಹಳ್ಳಿ, ಎಂ.ಹೊಸೂರು, ತೆಂಡೇಕೆರೆ, ಬಣ್ಣೇನಹಳ್ಳಿ, ಮೋದೂರು, ತಗಡೂರು, ಅಗಸರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ರೂಪ ಮತ್ತು ಜಿಪಂ ಮಾಜಿಸದಸ್ಯ ಅಂಬರೀಶ್ ಮಳೆ ಹಾನಿಯನ್ನು ವೀಕ್ಷಿಸಿ ರೈತಬಂಧುಗಳಿಗೆ ಸಾಂತ್ವನ ಹೇಳಿ ಆತ್ಮವಿಶ್ವಾಸ ತುಂಬಿದರು..

ತೋಟಗಾರಿಕೆ ಅಧಿಕಾರಿ ಡಾ.ಜಯರಾಂ, ರಾಜಶ್ವನಿರೀಕ್ಷಕ ಪುರುಷೋತ್ತಮ, ಗ್ರಾಮಲೆಕ್ಕಾಧಿಕಾರಿ ಆನಂದ, ಸಂತ್ರಸ್ತ ರೈತರಾದ ಧರ್ಮಲಿಂಗಪ್ಪ, ಈರಪ್ಪ, ಬಸಮ್ಮ, ಭಾಗ್ಯಮ್ಮ, ಸುಬ್ಬಣ್ಣ, ತಮ್ಮಯ್ಯ, ಮಂಜುಗೌಡ, ಟಿಎಪಿಸಿಎಂಎಸ್ ಮಾಜಿನಿರ್ದೇಶಕ ಹೇಮಣ್ಣ, ಅರ್ಜುನಪಾರ್ಥ, ಜಾವೀದ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು..

ವರದಿ..ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: