May 6, 2024

Bhavana Tv

Its Your Channel

ಕೆ.ಆರ್.ಪೇಟೆ ಮಿನಿ ವಿಧಾನಸೌಧಕ್ಕೆ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಭೇಟಿ, ರೈತಮುಖಂಡರೊOದಿಗೆ ಸಮಾಲೋಚನೆ..

ಕೆ.ಆರ್.ಪೇಟೆ:- ನಿಗಧಿತ ಕಾಲಮಿತಿಯೊಳಗೆ ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ತಹಶೀಲ್ದಾರ್ ರೂಪ ಅವರಿಗೆ ಸೂಚನೆ ನೀಡಿದ ಡಿಸಿ ಅಶ್ವಥಿ. ಮಿನಿ ವಿಧಾನಸೌಧದ ಆವರಣದಲ್ಲಿ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಹೆಲ್ಪ್ ಡೆಸ್ಕ್ ಸ್ಥಾಪಿಸಿ, ಜನರಿಗೆ ಅನುಕೂಲ ಮಾಡಿಕೊಡಿ ಎಂದು ಅಶ್ವಥಿ ಸೂಚನೆ ನೀಡಿದರು
ರೈತರು ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ, ಲಂಚದ ಹಣಕ್ಕಾಗಿ ಒತ್ತಾಯಿಸುವ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದರು

ಕಂದಾಯ ಇಲಾಖೆಯ ಆಡಳಿತದ ವೇಗವನ್ನು ಚುರುಕುಗೊಳಿಸಿ, ಆರು ತಿಂಗಳ ಒಳಗೆ ರೈತರ ಮನವಿಗಳಿಗೆ ಶಾಶ್ವತ ಪರಿಹಾರ ನೀಡಿ ಕೋರ್ಟು ಕಛೇರಿಗಳಿಗೆ ಅಲೆಸದಂತೆ ಕ್ರಮಕೈಗೊಳ್ಳಬೇಕು ಎಂದು ಪಾಂಡವಪುರ ಎಸಿ ಶಿವಾನಂದಮೂರ್ತಿ ಅವರಿಗೆ ನಿರ್ದೇಶನ ನೀಡಿದ ಡಿಸಿ ಅಶ್ವಥಿ..

ಜಿಲ್ಲಾ ಪಂಚಾಯತಿ ಸಿಇಓ ದಿವ್ಯಪ್ರಭು, ಡಿಡಿಪಿಐ ಜವರೇಗೌಡ, ಹೇಮಾವತಿ ಜಲಾಶಯ ಯೋಜನೆಯ ಸೂಪರಿಂಟೆAಡೆAಟ್ ಎಂಜಿನಿಯರ್ ಚಂದ್ರಶೇಖರ್, ಇಇ ಶಿಲ್ಪಾ, ಭೂದಾಖಲೆಗಳ ಸಹಾಯಕ ನಿರ್ದೇಶಕ ಪರಶಿವನಾಯಕ್, ರೈತಮುಖಂಡರಾದ ಮುದುಗೆರೆ ರಾಜೇಗೌಡ, ಮಂದಗೆರೆ ಜಯರಾಂ, ಪಿಬಿ ಮಂಚನಹಳ್ಳಿ ನಾಗಣ್ಣಗೌಡ, ಮರುವನಹಳ್ಳಿ ಶಂಕರ್, ಮುದ್ದುಕುಮಾರ್, ಬೂಕನಕೆರೆ ನಾಗರಾಜು, ಚೌಡೇನಹಳ್ಳಿ ನಾರಾಯಣಸ್ವಾಮಿ, ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ.

error: