
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಹೊಯ್ಸಳ ಶಿಲ್ಪಕಲೆಯ ಅಪೂರ್ವ ತಾಣ..ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಂಡದ ಸದಸ್ಯರು ಹಾಗೂ ಇನ್ ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಭೇಟಿ ನೀಡಿದರು ದೇವಾಲಯದ ವಿಶೇಷವಾದ ಹೆಬ್ಬೆರಳು ಗಾತ್ರದ ಆಂಜನೇಯನು ಎಳನೀರು ಕುಡಿಯುತ್ತಿರುವ ಭಂಗಿಯನ್ನು ಕಣ್ತುಂಬಿಕೊAಡು ರೋಮಾಂಚನಗೊAಡ ಸುಧಾಮೂರ್ತಿ..
ಬೇಲೂರು ದೇವಾಲಯವನ್ನು ಹೊರಗೆ ನೋಡಬೇಕು, ಹಳೇ ಬೀಡು ದೇವಾಲಯವನ್ನು ಒಳಗೆ ನೋಡಬೇಕು ಆದರೆ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಶಿಲ್ಪಕಲೆಯ ವೈಭವವು ಒಳಗೆ ಮತ್ತು ಹೊರಗೆ ಅದ್ಭುತವಾಗಿದೆ..ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳನ್ನು ಜೋಪಾನ ಮಾಡಿ ಸಂರಕ್ಷಿಸಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ಪಟ್ಟ ಸುಧಾಮೂರ್ತಿ ಹೊಸಹೊಳಲು ದೇವಾಲಯದ ಶಿಲ್ಪಕಲಾ ವೈಭವವನ್ನು ಕಣ್ತುಂಬಿಕೊAಡು ಸಂತೋಷವಾಗಿದೆ .. ಗ್ರಾಮದ ಜನರು ಜೀವಂತ ಸ್ಮಾರಕವಾದ ದೇವಾಲಯವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಮಾರಂಭಗಳಲ್ಲಿ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಸುಧಾಮೂರ್ತಿ ಮನವಿ ಮಾಡಿದರು ..
ಮಲೇಷಿಯಾ ದೇಶದಿಂದ ಆಗಮಿಸಿದ್ದ ಯುನೆಸ್ಕೋ ತಂಡದ 15. ಸದಸ್ಯರ ತಂಡವನ್ನು ತಹಶೀಲ್ದಾರ್ ಎಂ.ವಿ.ರೂಪ ಆತ್ಮೀಯವಾಗಿ ಬರಮಾಡಿಕೊಂಡರು..
ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಸುತ್ತಲೂ ಒಂದು ಸುತ್ತು ಸಂಚರಿಸಿ ಅಪರೂಪದ ಶಿಲ್ಪಗಳು ಹಾಗೂ ರಾಮಾಯಣ, ಮಹಾಭಾರತ ಕುರಿತು ಶಿಲೆಯಲ್ಲಿ ಕೆತ್ತಿರುವ ದೃಶ್ಯಗಳನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದುಕೊಂಡರು.. ದೇವಾಲಯದ ಒಳಭಾಗದ ತ್ರಿಕೂಟಾಚಲದಲ್ಲಿ ಪ್ರಧಾನ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ನಂಬಿ ನಾರಾಯಣಸ್ವಾಮಿ, ಎಡಭಾಗದ ಗುಡಿಯಲ್ಲಿರುವ ಶ್ರೀ ಕೊಳಲುಗೋಪಾಲಸ್ವಾಮಿ ಹಾಗೂ ಬಲಭಾಗದ ಗರ್ಭಗುಡಿಯಲ್ಲಿ ಪ್ರಹ್ಲಾದನ ಸಮೇತವಾಗಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು..
ರಾಜ್ಯ ಪುರಾತತ್ವ ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶಕ ಡಾ.ದೇವರಾಜು, ಮುಜರಾಯಿ ಇಲಾಖೆಯ ಕಾರ್ಯದರ್ಶಿ ಸತ್ಯವತಿ, ತಹಶೀಲ್ದಾರ್ ರೂಪ, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ರಾಜಶ್ವನಿರೀಕ್ಷಕಿ ಚಂದ್ರಕಲಾ, ಮಂಡ್ಯ ಜಿಲ್ಲೆ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಪುರಸಭಾ ಮುಖ್ಯಾಧಿಕಾರಿ ಕುಮಾರ್, ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ, ಪಟ್ಟಣ ಠಾಣೆಯ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್, ಹೊಸಹೊಳಲು ಗ್ರಾಮದ ಮುಖಂಡರಾದ ಡಾ.ಶ್ರೀನಿವಾಸಶೆಟ್ಡಿ, ಸುರೇಶ್ ಹರಿಜನ, ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು..
ವರದಿ..ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ.

More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ