
ಕೆ.ಆರ್.ಪೇಟೆ ಪಟ್ಟಣದ ಚನ್ನರಾಯಪಟ್ಟಣ ಮೈಸೂರು ರಸ್ತೆಯಲ್ಲಿ ನೂತನವಾಗಿ ಆರಂಭವಾದ “ನಾಢ್” ಇಂಡೋ ಅರಬಿಕ್ ರೆಸ್ಟೋರೆಂಟ್ ಅನ್ನು ತಹಶೀಲ್ದಾರ್ ಎಂ.ವಿ.ರೂಪ ಉದ್ಘಾಟಿಸಿ ಶುಭ ಹಾರೈಸಿದರು…

ಹಾಸನದ ಸೈಯ್ಯದ್ ಪರ್ವೇಜ್ ನದೀಂ ಮತ್ತು ಹುಧಾಫಾತಿಮಾ ದಂಪತಿಗಳು ಕೆ.ಆರ್.ಪೇಟೆ ಪಟ್ಟಣದ ಜನತೆಯ ಸೇವೆಗಾಗಿ ಸಮರ್ಪಿಸಿರುವ ಶುಚಿ ಮತ್ತು ರುಚಿಗೆ ಹೆಸರುವಾಸಿಯಾದ ನಾಢ್” ಇಂಡೋ ಅರಬಿಕ್ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದಾರೆ.
ಕೃಷ್ಣರಾಜಪೇಟೆಯ ಜನತೆ ಸ್ಪರ್ಧಾತ್ಮಕ ದರದಲ್ಲಿ ನೀಡಲು ಆರಂಬಿಸಿರುವ ಗುಣಮಟ್ಟದ ಸೇವೆಯನ್ನು ಪಡೆದುಕೊಂಡು ನೂತನ ಉಧ್ಯಮಕ್ಕೆ ಶುಭ ಹಾರೈಸಬೇಕು ಎಂದು ತಹಶೀಲ್ದಾರ್ ರೂಪ ಹೇಳಿದರು..
ಸಮಾಜ ಸೇವಕರಾದ ಸೈಯ್ಯದ್ ಪರ್ವೇಜ್ ನದೀಂ ಮಾತನಾಡಿ ಕೆ.ಆರ್.ಪೇಟೆ ತಾಲ್ಲೂಕು ಸೇರಿದಂತೆ ಪಟ್ಟಣದ ಜನತೆಗೆ ಗುಣಮಟ್ಟದ ಸೇವೆ ನೀಡಲು ಇಂಡೋ ಅರೆಬಿಕ್ ಶೈಲಿಯ ರೆಸ್ಟೋರೆಂಟ್ ಆರಂಭಿಸಲಾಗಿದೆ. ದಂಪತಿಗಳು ತಮ್ಮ ಮಕ್ಕಳು ಹಾಗೂ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಸುಸಜ್ಜಿತವಾದ ಎಸಿ ರೂಂಗಳಲ್ಲಿ ಗುಣಮಟ್ಟದ ಸೇವೆಯನ್ನು ಸ್ಪರ್ಧಾತ್ಮಕ ದರದಲ್ಲಿ ಪಡೆಯಬಹುದಾಗಿದ್ದು, ಹುಟ್ಟು ಹಬ್ಬ, ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಮಟನ್, ಚಿಕನ್ ಮಾಂಸಾಹಾರಿ ಊಟವನ್ನು ಸರಬರಾಜು ಮಾಡಲಾಗುವುದು. ಗ್ರಾಹಕರ ಸೇವೆಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ನದೀಂ ಹೇಳಿದರು..
ನಾಢ್” ಇಂಡೋ ಅರಬಿಕ್ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದಲ್ಲಿ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಪುರಸಭೆ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್, ಗ್ರೇಡ್ 2 ತಹಶೀಲ್ದಾರ್ ವಿಖಾರ್ ಅಹಮದ್, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾ, ಪುರಸಭೆ ಮುಖ್ಯಾಧಿಕಾರಿ ಕುಮಾರ್, ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ, ಯುವಮುಖಂಡರಾದ ಗಜಪಡೆ ಶ್ರೀಧರ್, ಪಟ್ಟು ವಿಶ್ವನಾಥ, ಹಾಫೀಜುಲ್ಲಾ ಷರೀಫ್, ಪಟ್ಟಣ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಸೇರಿದಂತೆ ಪಟ್ಟಣದ ಗಣ್ಯರು ಮುಸ್ಲಿಂ ಸಮುದಾಯದ ಬಂಧುಗಳು ಭಾಗವಹಿಸಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ