
ಕೆ.ಆರ್.ಪೇಟೆ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ, ನಾಸಿಕ್ ಡೋಲ್ ಸದ್ದಿಗೆ ಯುವಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ.ನಾರಾಯಣಗೌಡರ ಭರ್ಜರಿ ಡ್ಯಾನ್ಸ್.. ಸಚಿವರೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕಿದ ಯುವಜನರು ..
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಧರ್ಮಧ್ವಜ ಸೇವಾ ಸಮಿತಿಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು …
ಮಹಾರಾಷ್ಟ್ರ ರಾಜ್ಯದ ಪೂನಾ ಮಹಾ ನಗರದಿಂದ ಆಗಮಿಸಿದ್ದ ಡೋಲ್ ಪಾಠಕ್ ತಂಡದ ಕಲಾವಿದರ ತಂಡವು ಪ್ರದರ್ಶಿಸಿದ ನಾಸಿಕ್ ಡೋಲ್ ವಾದನಕ್ಕೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರು ಭರ್ಜರಿಯಾಗಿ ನೃತ್ಯ ಮಾಡಿ ಸಾರ್ವಜನಿಕರು, ಪಟ್ಟಣದ ನಿವಾಸಿಗಳು ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿ ಸಂಭ್ರಮ ತಂದರು..
ಕೇಸರಿ ಧ್ವಜಗಳ ಹಾರಾಟ, ಮಹಾರಾಷ್ಟ್ರ ಶೈಲಿಯ ಉತ್ತರ ಕರ್ನಾಟಕದ ಕೇಸರಿ ಪೇಟಗಳ ಮೇಲಾಟವು ಭರ್ಜರಿಯಾಗಿತ್ತು. ಎದೆಗಡಚಿಕ್ಕುವ ಡಿಜೆ ಶಬ್ಧಕ್ಕೆ ಹಾಗೂ ಸಿದ್ಧಿವಿನಾಯಕನ ಹಾಡುಗಳಿಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ಸಚಿವ ನಾರಾಯಣಗೌಡ ಭರ್ಜರಿ ಡ್ಯಾನ್ಸ್ ಮಾಡಿ ನೋಡುಗರಿಗೆ ರಸದೌತಣ ಉಣಬಡಿಸಿದರು..
ನಗಾರಿಗಳು, ಡೋಲು ಹಾಗೂ ತಮಟೆಯ ಶಬ್ಧಕ್ಕೆ ಜಾನಪದ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ ಸಚಿವರು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದರು..
ಕೆ.ಆರ್.ಪೇಟೆ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂಭಾಗದಿAದ ಆರಂಭವಾದ ಹಿಂದೂ ಮಹಾಗಣಪತಿಯ ಭವ್ಯ ಮೆರವಣಿಗೆಯು ಮುಖ್ಯರಸ್ತೆಯಲ್ಲಿ ಪ್ರವಾಸಿ ಮಂದಿರದ ಬಳಿಯ ಎಂ.ಕೆ.ಬೊಮ್ಮೇಗೌಡ ವೃತ್ತದ ಮೂಲಕ ಸಾರ್ವಜನಿಕ ಆಸ್ಪತ್ರೆಯ ಬಳಿ ತೆರಳಿ ಬಿಜಿಎಸ್ ಸ್ಕೂಲ್ ಮೂಲಕ ಹಳೇ ಕಿಕ್ಕೇರಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಗ್ರಾಮಭಾರತಿ ಶಾಲೆ ಹೊಸ ಹೇಮಗಿರಿ ರಸ್ತೆಯ ಮೂಲಕ ಸಾಗಿ ದುರ್ಗಾಭವನ್ ಬಸವೇಶ್ವರ ವೃತ್ತದ ಮೂಲಕ ಪಟ್ಟಣದ ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯನ್ನು ತಲುಪಿತು..
ವಿಶ್ವಹಿಂದೂಪರಿಷತ್ ಕಾರ್ಯಕರ್ತರಾದ ಮುರುಗೇಶ್ ದಾರಿಯುದ್ದಕ್ಕೂ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಹಿಂದೂ ಮಹಾಗಣಪತಿಯನ್ನು ವಿಸರ್ಜಿಸಲಾಯಿತು.. ಸಾರ್ವಜನಿಕ ಆಸ್ಪತ್ರೆಯ ಮುಂದೆ ಹಿಂದೂ ಮಹಾಗಣಪತಿಯ ಮೆರವಣಿಗೆಯು ಆಗಮಿಸಿದಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್ ನೇತೃತ್ವದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ವೈದ್ಯರಾದ ಡಾ.ಶ್ರೀಕಾಂತ್, ಡಾ.ರವಿ, ಡಾ.ಪ್ರಿಯಾಂಕಾ, ಡಾ.ಶಶಿಧರ್, ಫಾರ್ಮಾಸಿಸ್ಟ್ ಸತೀಶ್, ಹಿರಿಯ ಸುಶ್ರೂಷಕಿ ಸೀತಮ್ಮ, ಕಲ್ಪನಾ, ಚಾಲಕ ರಾಮಪ್ರಸಾದ್, ಆದಿಲ್ ಪಾಷ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿಗಳು ಭರ್ಜರಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಹಿAದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯ ಅಂಗವಾಗಿ ಕೃಷ್ಣರಾಜಪೇಟೆ ಪಟ್ಟಣವು ಸಂಪೂರ್ಣವಾಗಿ ಕೇಸರಿಮಯವಾಗಿತ್ತು..ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಮುಂಜಾಗರೂಕತಾ ಕ್ರಮವಾಗಿ ಕೆ.ಆರ್.ಪೇಟೆ ಪಟ್ಟಣ ಪೋಲಿಸರು ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಹಾಗೂ ಕೆ.ಎಸ್.ನಿರಂಜನ್ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.. ಮೆರವಣಿಗೆಯಲ್ಲಿ ಬಂದ ಹಿಂದೂ ಮಹಾಗಣಪನಿಗೆ ಮುಸ್ಲಿಂ ಧರ್ಮದ ಹಣ್ಣಿನ ವ್ಯಾಪಾರಿಗಳು ಪೂಜೆ ಸಲ್ಲಿಸಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದು ವಿಶೇಷವಾಗಿತ್ತು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ