April 18, 2025

Bhavana Tv

Its Your Channel

ರೈತ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸಚಿವ ಕೆ ಸಿ ನಾರಾಯಣಗೌಡ

ಕಿಕ್ಕೇರಿ: ರೈತ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ದೈರ್ಯ ತುಂಬಿದ ರೇಷ್ಮೆ, ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವರಾದ ಕೆ ಸಿ ನಾರಾಯಣಗೌಡ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಶಂಕರಪುರ ಗ್ರಾಮದ ರೈತ ಬೋಜರಾಜು (ಚೇತನ್) ಶುಂಠಿ ಬೆಳೆ ನಷ್ಟದಿಂದ ಸಾಲ ಬಾದೆಗೆ ಸಿಲುಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡ್ಡಿದ್ದರು.ಇಂದು ರೇಷ್ಮೆ, ಕ್ರೀಡಾ, ಯುವ ಸಬಲೀಕರಣ ಸಚಿವರಾದ ಕೆ ಸಿ ನಾರಾಯಣಗೌಡ ರವರು ಶಂಕರಪುರ ಗ್ರಾಮಕ್ಕೆ ಭೇಟಿ ನೀಡಿ ಬೋಜರಾಜು ರವರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು ಅಲ್ಲದೆ ಮಗುವಿಗೆ ಒಳ್ಳೆಯ ವಿದ್ಯಾಬ್ಯಾಸ ಕೊಡಿಸುವಂತೆ ತಿಳಿಸಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಸರ್ಕಾರದಿಂದ ಕುಟುಂಬಕ್ಕೆ ನೆರವು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: