
ಕೆ ಆರ್ ಪೇಟೆ :- ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ್ ಡೆವೆಲೆಪ್ ಮೆಂಟ್ ಫೌಂಡೇಶನ್ ತಮಿಳುನಾಡು ರಾಜ್ಯದ ಸಂಸ್ಥಾಪಕ ಅಜಿತ್ ಕುಮಾರ್ ಅವರು ನಡೆಸಿದ ಗೋವಾ ರಾಜ್ಯದ ಕೊಲಂಗುಟೆ ಬೀಚ್ ನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ನಡೆದ 19 ವರುಷದ ಮೇಲ್ಪಟ್ಟವರಿಗೆ, ನಾಲ್ಕನೇ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕೆ ಆರ್ ಪೇಟೆ ಯುವಕ ಅಲ್ಲಮಪ್ರಭು ಎಸ್ ಎಂ. ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.
ಅಕ್ಟೋಬರ್ 8,9,10, ರಂದು ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಇಡೀ ದೇಶದ ಗಮನ ಸೆಳೆದ ಇಪ್ಪತ್ನಾಲ್ಕು ವರ್ಷದ ಅಲ್ಲಮ್ಮ ಪ್ರಭು ಚಿನ್ನದ ಪದಕ ಗೆಲ್ಲುವ ಮೂಲಕ, ಥೈಲ್ಯಾಂಡ್ ನಲ್ಲಿ ಮಾರ್ಚ್ 2023ರಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ ಯಾಗಿದ್ದಾನೆ. ಸ್ಥಳೀಯ ಶಾಸಕರಾದ ಮೈಕೆಲ್ ಲೋಬೋ ಅವರು ಯೋಗ ಸ್ಪರ್ಧೆ ಉದ್ಘಾಟನೆ ಮಾಡಿದ್ದಾರೆ.
ಕೆ ಆರ್ ಪೇಟೆ ಪಟ್ಟಣದ ಈ ಹುಡುಗನ ಸಾಧನೆಗೆ ಕ್ರೀಡಾ ಸಚಿವ ನಾರಾಯಣಗೌಡ, ಹಾಗೂ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್ , ಮನ್ಮುಲ್ ನಿರ್ದೇಶಕರಾದ ಡಾಲುರವಿ, ಹೆಚ್ ಟಿ ಮಂಜು, ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಬಿ ಎಲ್ ದೇವರಾಜ್ ಜೆಡಿಎಸ್ ಮುಖಂಡರಾದ ಕೌನ್ಸಿಲರ್ ಬಸ್ ಸಂತೋಷ್, ಬಿ.ಎಂ ಕಿರಣ್, ಸೇರಿದಂತೆ ಮುಂತಾದ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.
ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ

More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ