May 6, 2024

Bhavana Tv

Its Your Channel

ದಕ್ಷ ಪ್ರಾಮಾಣಿಕ, ದೂರದರ್ಶಿ ಆಡಳಿತ ನೀಡಿದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮ

ಕೆಆರ್‌ಪೇಟೆ ; ದೂರ ದೃಷ್ಟಿಯ ಆಡಳಿತಗಾರ, ಸರ್ವಧರ್ಮಗಳ ಸಾಕಾರ ಬಂಧು, ಬೆಂಗಳೂರು ಮಹಾನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಐನೂರ ಹದಿನಾಲ್ಕನೇ ಜಯಂತ್ಯೋತ್ಸವ ಸಮಾರಂಭವನ್ನು ಕೆ ಆರ್ ಪೇಟೆ ಪುರಸಭೆಯಲ್ಲಿ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು..
ಪುರಸಭೆಯ ಉಪಾಧ್ಯಕ್ಷೆ ಗಾಯತ್ರಿ ಸುಬ್ಬಣ್ಣ, ಮುಖ್ಯಾಧಿಕಾರಿ ಬಸವರಾಜು, ಪುರಸಭೆಯ ಹಿರಿಯ ಸದಸ್ಯರಾದ ಡಿ.ಪ್ರೇಮ್ ಕುಮಾರ್ ಧರ್ಮಪ್ರಭು ಕೆಂಪೇಗೌಡರ ಕುರಿತು ಮಾತನಾಡಿ ದಕ್ಷ ಆಡಳಿತ ಕುರಿತು ಗುಣಗಾನ ಮಾಡಿದರು..
ಪುರಸಭೆಯ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್ ಮಾತನಾಡಿ ವಿಜಯನಗರದ ಸಾಮಂತರಾಗಿದ್ದರೂ ದೂರ ದೃಷ್ಟಿಯ ಆಡಳಿತವನ್ನು ನೀಡಿ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಾಣ ಮಾಡಿದ ಕೆಂಪೇಗೌಡರು ಕೆರೆಕಟ್ಟೆಗಳು ಹಾಗೂ ಗುಡಿ ಗೋಪುರಗಳನ್ನು ನಿರ್ಮಿಸಿ ಎಲ್ಲ ಜನಾಂಗಗಳ ಜನರು ನೆಮ್ಮದಿಯಿಂದ ಜೀವನ ನಡೆಸಲು ಪೇಟೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟರು ಎಂದು ನಾಡಪ್ರಭು ಕೆಂಪೇಗೌಡರ ಸೇವೆಯನ್ನು ಸ್ಮರಿಸಿದ ಮುಖಂಡರು ಧರ್ಮ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ನಮನ ಅರ್ಪಿಸಿದರು..
ನಾಡಪ್ರಭು ಕೆಂಪೇಗೌಡರ ಜಯಂತಿ ಉತ್ಸವ ಸಮಾರಂಭದಲ್ಲಿ ಪ್ರವೀಣ್ ಶೆಟ್ಟಿ, ಶಾಮಿಯಾನ ತಿಮ್ಮೇಗೌಡ, ಪಂಕಜ ಪ್ರಕಾಶ್, ಗಿರೀಶ್, ಇಂದ್ರಾಣಿ ವಿಶ್ವನಾಥ್, ಕಲ್ಪನಾ ದೇವರಾಜು, ಸುಗುಣ ರಮೇಶ್, ಕಚೇರಿಯ ವ್ಯವಸ್ಥಾಪಕ ಸೋಮಶೇಖರ್, ಕಂದಾಯಾಧಿಕಾರಿ ರವಿಕುಮಾರ್, ಪರಿಸರ ಇಂಜಿನಿಯರ್ ಅರ್ಚನಾ ಆರಾಧ್ಯ, ಆರೋಗ್ಯ ಪರಿವೀಕ್ಷಕ ಅಶೋಕ್, ರಾಜ್ಯಶ್ವ ನಿರೀಕ್ಷಕರಾದ ಹೆಚ್ ಪಿ ನಾಗರಾಜು, ಲೆಕ್ಕಾಧಿಕಾರಿ ಮಂಜುಳಾ, ಕೆಎನ್ ಶಾರದ ಶಾರದಮ್ಮ, ರತ್ನ, ಬಬಿತಾ ಸೇರಿದಂತೆ ಕಚೇರಿಯ ಸಿಬ್ಬಂದಿಗಳು ಹಾಗೂ ನೌಕರವರ್ಗದವರು ಉಪಸ್ಥಿತರಿದ್ದರು..
ವರದಿ ಡಾ. ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ .

error: