May 6, 2024

Bhavana Tv

Its Your Channel

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ

ಕೆಆರ್‌ಪೇಟೆ ; ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಮಹೋತ್ಸವ ಕಾರ್ಯಕ್ರಮ ಅಂದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡಪರ ಹೋರಾಟಗಾರ ಸಿ.ಕೆ. ರಾಮೇಗೌಡ ಮಾತನಾಡಿ ಧರ್ಮಪ್ರಭು ಕೆಂಪೇಗೌಡರ ದೂರದರ್ಶಿತ್ವದ ಆಡಳಿತದ ಫಲವಾಗಿ ವಿಶ್ವಮಾನ್ಯ ಬೆಂಗಳೂರು ಮಹಾನಗರ ನಿರ್ಮಾಣವಾಗಿದೆ. ಮಾನವನ ವೃತ್ತಿ ಕಸುಬುಗಳಿಗೆ ಅನುಸಾರವಾಗಿ ಒಂದೊ0ದು ಪೇಟೆಗಳನ್ನು ನಿರ್ಮಿಸಿರುವ ಕೆಂಪೇಗೌಡರು ಸರ್ವ ಜನಾಂಗದ ಶಾಂತಿಯ ತೋಟದ ಹೊಂಗನಸಿನ ಆಧಾರದ ಮೇಲೆ ಬೆಂಗಳೂರು ಮಹಾನಗರವನ್ನು ನಿರ್ಮಿಸಿದ್ದಲ್ಲದೆ ದಕ್ಷ ಪ್ರಾಮಾಣಿಕ ಆಡಳಿತವನ್ನು ನಾಡಿನ ಜನತೆಗೆ ನೀಡಿದ್ದಾರೆ ಎಂದರು.
ಮಹಿಳಾ ಸಮಾನತೆ ಶಿಕ್ಷಣ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದ್ದ ಮೈಸೂರು ಅರಸರು ಧರ್ಮ ಪ್ರಭುಗಳಾದ ಕೆಂಪೇಗೌಡರ ಆಡಳಿತವನ್ನು ಅನುಸರಿಸಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.. ಸರ್ವ ಜನಾಂಗಗಳಿಗೂ ಸಾಮಾಜಿಕ ನ್ಯಾಯವನ್ನು ನೀಡಿ ಅವರ ವೃತ್ತಿ ಕಸುಬುಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿ ಕೊಡುವ ಮೂಲಕ ಜನಸಾಮಾನ್ಯರ ದೊರೆಗಳಾಗಿ ಹೊರಹೊಮ್ಮಿದ್ದ ಕೆಂಪೇಗೌಡರು ಸರ್ವ ಶ್ರೇಷ್ಠ ದಾರ್ಶನಿಕರಾಗಿದ್ದರಲ್ಲದೆ ಅಪ್ರತಿಮ ಆಡಳಿತಗಾರರಾಗಿದ್ದರು ಎಂದು ರಾಮೇಗೌಡ ಗುಣಗಾನ ಮಾಡಿದರು..

ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಎಲ್ ದೇವರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕಾರ್ಯಕ್ರಮದ ಸಂಘಟಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮವನ್ನು ರೂಪಿಸಬೇಕು.. ಒಬ್ಬರೇ ಅತಿಥಿಗಳಿಗೆ ಎರಡು ಮೂರು ಜವಾಬ್ದಾರಿಗಳನ್ನು ನೀಡಿದರೆ ಹೇಗೆ? ಕಾರ್ಯಕ್ರಮದ ಉದ್ಘಾಟಕರು ಉದ್ಘಾಟನೆಯ ಕೆಲಸ ಮಾಡಬೇಕು, ಅಧ್ಯಕ್ಷತೆ ವಹಿಸಿರುವವರು ಅಧ್ಯಕ್ಷರ ಭಾಷಣ ಮಾಡಬೇಕು, ಆದರೆ ಇಲ್ಲಿ ಉದ್ಘಾಟನೆ ಮಾಡಿದವರೇ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಒಬ್ಬೊಬ್ಬ ಅತಿಥಿಗಳಿಗೆ ಒಂದೊ0ದು ಜವಾಬ್ದಾರಿ ವಹಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕಡೆಗೆ ಗಮನಹರಿಸಬೇಕು ಎಂದು ದೇವರಾಜು ಕಿವಿಮಾತು ಹೇಳಿದರು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್ ಟಿ ಮಂಜು ಮಾತನಾಡಿ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಗೊಂದಲವನ್ನು ಹುಟ್ಟು ಹಾಕುವುದು ಬೇಡ, ಶಿಷ್ಟಾಚಾರದ ಅಡಿಯಲ್ಲಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಒಬ್ಬೊಬ್ಬ ಅತಿಥಿಗಳಿಗೆ ಒಂದೊ0ದೇ ಜವಾಬ್ದಾರಿ ವಹಿಸಬೇಕು. ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಯಾವುದೇ ಬಗೆಯ ಗೊಂದಲಗಳಾಗದ0ತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿ ಮಾತು ಆರಂಭಿಸಿದ ಶಾಸಕರು ಬೆಂಗಳೂರು ಮಹಾನಗರದ ನಿರ್ಮಾತೃಗಳಾದ ಧರ್ಮಪ್ರಭು ಕೆಂಪೇಗೌಡರ ದೂರದೃಷ್ಟಿಯ ಆಡಳಿತದ ಫಲವಾಗಿ ಶ್ರೀಸಾಮಾನ್ಯರು ಹಾಗೂ ರೈತರಿಗೆ ಬೇಕಾದ ಕೆರೆಕಟ್ಟೆಗಳು, ದೇವಾಲಯಗಳು ಮಾರುಕಟ್ಟೆಗಳು ಹಾಗೂ ಕೋಟೆ ಕೊತ್ತಲಗಳನ್ನು ನಿರ್ಮಿಸಿ ಧನಿ ಇಲ್ಲದ ಸಾಮಾನ್ಯ ಜನರಿಗೆ ಧ್ವನಿಯಾಗಿ ಕೆಲಸ ಮಾಡಿದರು ಎಂದು ಕೆಂಪೇಗೌಡರ ಆಡಳಿತವನ್ನು ಸ್ಮರಿಸಿದ ಶಾಸಕ ಮಂಜು ವಿಜಯನಗರದ ಅರಸರ ಸಾಮಂತ ರಾಜರಾಗಿ ಕೆಂಪೇಗೌಡರು ಆಡಳಿತ ನಡೆಸಿದರೂ ಸ್ವತಂತ್ರ ರಾಜರಾಗಿ ಜನಪರವಾದ ಆಡಳಿತವನ್ನು ನೀಡಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ ದಕ್ಷ ಆಡಳಿತವನ್ನು ಸ್ಮರಣೆ ಮಾಡಿದರು..

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.. ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಅಲಂಕರಿಸಿ ಕೆ ಆರ್ ಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜನಪದ ಕಲಾ ತಂಡಗಳೊ0ದಿಗೆ ಮೆರವಣಿಗೆ ಮಾಡಿ ವೇದಿಕೆಗೆ ತರಲಾಯಿತು..ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ ಡಾ. ಕೆಆರ್ ನೀಲಕಂಠ ಕೃಷ್ಣರಾಜಪೇಟೆ .

error: