April 30, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲೂಕಿನಲ್ಲಿ ಡ್ರಾಗನ್ ಫ್ರೂಟ್ ಬೇಸಾಯ

ಕೃಷ್ಣರಾಜಪೇಟೆ ; ತಾಲೂಕಿನ ಗ್ರಾಮದ ಕೀರ್ತಿರಾಜ್ ತಮ್ಮ ಒಂದೂವರೆ ಎಕರೆ ಕೃಷಿ ಭೂಮಿಯಲ್ಲಿ ವಾಣಿಜ್ಯ ಬೆಳೆಯಾಗಿರುವ ಡ್ರಾಗನ್ ಫ್ರೂಟ್ ಬೇಸಾಯ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಮಾರುಕಟ್ಟೆಯಲ್ಲಿ ಅಪಾರವಾದ ಬೇಡಿಕೆಯನ್ನು ಹೊಂದಿರುವ ಡ್ರಾಗನ್ ಫ್ರೂಟ್ ಬೇಸಾಯವು ಕೀರ್ತಿರಾಜ್ ಅವರಿಗೆ ಹೆಚ್ಚಿನ ಲಾಭ ಮತ್ತು ಯಶಸ್ಸನ್ನು ತಂದು ಕೊಟ್ಟಿದೆ.
ಕೃಷಿ ತಜ್ಞರ ಸಲಹೆ ಮಾರ್ಗದರ್ಶನವನ್ನು ಪಡೆದುಕೊಂಡು ಕೀರ್ತಿರಾಜ್ ಡ್ರ‍್ಯಾಗನ್ ಫ್ರೂಟ್ ಬೇಸಾಯ ಮಾಡುವ ಜೊತೆಗೆ ಡ್ರಾಗನ್ ಫ್ರೂಟ್ ಬೆಳೆಯನ್ನು ಬೇಸಾಯ ಮಾಡಲು ಇಚ್ಚಿಸುವ ರೈತ ಬಾಂಧವರಿಗೆ ಸಲಹೆ ಸೂಚನೆ ಮಾರ್ಗದರ್ಶನವನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.
ಹೈಬ್ರಿಡ್ ತಳಿಯ ಡ್ರ‍್ಯಾಗನ್ ಫ್ರೂಟ್ ಗಿಡಗಳನ್ನು ಐವತ್ತು ರೂಪಾಯಿಗೆ ಒಂದರ0ತೆ ಮಾರಾಟ ಮಾಡುತ್ತಿರುವ ಕೀರ್ತಿರಾಜ್ 700 ರಿಂದ 800ಗ್ರಾಂ ತೂಕದ ಹಣ್ಣುಗಳನ್ನು ನೂರು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಕೆ ಆರ್ ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದಲ್ಲಿ ಬೆಳೆಯುತ್ತಿರುವ ಡ್ರಾಗನ್ ಫ್ರೂಟ್ ಹಣ್ಣುಗಳು ಮೈಸೂರು ಬೆಂಗಳೂರು ಸೇರಿದಂತೆ ಮುಂಬೈ ಮಹಾನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮಾರಾಟವಾಗುತ್ತಿರುವುದಲ್ಲದೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯನ್ನು ಹೊಂದಿವೆ.
ಹಿರಿಕಳಲೆ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ನಡೆದ ಸ್ವ ಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ವಸ್ತು ಪ್ರದರ್ಶನದಲ್ಲಿ ಡ್ರ‍್ಯಾಗನ್ ಫ್ರೂಟ್ ಮಾರಾಟ ಮಳಿಗೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ವಿಶೇಷವಾಗಿದೆ. ಬ್ಯಾಂಕಿನ ಮಹಾಪ್ರಬಂದಕರಾದ ಭಾಗ್ಯ ರೇಖಾ ಅವರು ರೈತ ದಂಪತಿಗಳನ್ನು ಅಭಿನಂದಿಸಿ ಶುಭಹಾರೈಸಿದ್ದು ವಿಶೇಷವಾಗಿತ್ತು. ಡ್ರ‍್ಯಾಗನ್ ಫ್ರೂಟ್ ಬೇಸಾಯ ಮಾಡುತ್ತಿರುವ ಕೀರ್ತಿರಾಜ್ ಅವರ ತೋಟಕ್ಕೆ ಹೋಗಲು ಇಚ್ಚಿಸುವವರು ಕೆ ಆರ್ ಪೇಟೆ ಪಟ್ಟಣದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹೆಮ್ಮಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೀರ್ತಿರಾಜ್ ಅವರಿಂದ ಕೃಷಿ ಚಟುವಟಿಕೆಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ಕೀರ್ತಿರಾಜ್ ಅವರ ಮೊಬೈಲ್ ಸಂಖ್ಯೆ 8431162356 ಆಗಿದೆ.
ವರದಿ ಡಾ. ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ

error: