April 27, 2024

Bhavana Tv

Its Your Channel

ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು

ಕೆ.ಆರ್.ಪೇಟೆ : ನೀರಿಲ್ಲದೆ ಒಣಗಿ ಖಾಲಿಯಾಗುತ್ತಿರುವ ಕೆ.ಆರ್. ಪೇಟೆಯ ದೇವಿರಮ್ಮಣ್ಣಿ ಕೆರೆ. ಹೇಮಾವತಿ ನದಿ ಕಾಲುವೆಯ ಮೂಲಕ ನೀರು ಹರಿಸಿ ಕೆರೆ ತುಂಬಿಸಲು ಮುಂದಾಗದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ.. ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು ..

ಹೇಮಾವತಿ ಎಡದಂಡ ನಾಲೆಯ ಮೂಲಕ ನೀರು ಹರಿಸಿ ಕೆರೆ ತುಂಬಿಸದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕೆರೆಯ ಅಂಗಳಕ್ಕೆ ಇಳಿದು ಕೆರೆ ಅಚ್ಚುಕಟ್ಟಿನ ರೈತರು ಪ್ರತಿಭಟನೆ ನಡೆಸಿದರು.
ಕೆ.ಆರ್ ಪೇಟೆ ತಾಲೂಕಿನಲ್ಲಿ ಅತ್ಯಂತ ದೊಡ್ಡ ಕೆರೆಯಾಗಿರುವ ಕೆ ಆರ್ ಪೇಟೆ ಪಟ್ಟಣದ ದೇವಿರಮ್ಮಣ್ಣಿಕೆರೆ ಖಾಲಿಯಾಗುತ್ತಿದೆ.. ಹೇಮಾವತಿ ಎಡದಂಡ ನಾಲೆಯ ಮೂಲಕ ನೀರು ಹರಿಸಿ ಕೆರೆ ತುಂಬಿಸಲು ವಿಫಲರಾಗಿರುವ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಯಂತರ ಹಾಗೂ ಸಹಾಯಕ ಇಂಜಿನಿಯರ್ ಗಳ ನಿರ್ಲಕ್ಷ ಹಾಗೂ ಕರ್ತವ್ಯ ಲೋಕದ ವಿರುದ್ಧ ಕಿಡಿಕಾರಿರುವ ದೇವಿರಮ್ಮಣ್ಣಿಕೆರೆ ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರು ಸಮಿತಿಯ ಅಧ್ಯಕ್ಷ ಅಗ್ರಹಾರ ಕೃಷ್ಣೇಗೌಡ ನೇತೃತ್ವದಲ್ಲಿ ಕೆರೆ ಕೋಡಿಯ ಪ್ರದೇಶದಲ್ಲಿ ಕೆರೆಯ ಅಂಗಳಕ್ಕೆ ಇಳಿದು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು..

ಹೇಮಾವತಿ ನದಿಯಿಂದ ಕಾನೂನುಬಾಹಿರವಾಗಿ ಕೃಷ್ಣರಾಜಸಾಗರಕ್ಕೆ ನೀರು ಹರಿಸಿಕೊಂಡು ತಮಿಳುನಾಡಿಗೆ ನೀರು ಬಿಡುತ್ತಿರುವ ನೀರಾವರಿ ಇಲಾಖೆ ಅಧಿಕಾರಿಗಳು ಹೇಮಾವತಿ ನದಿ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳನ್ನು ತುಂಬಿಸಲು ಮಾತ್ರ ಬೇಜವಾಬ್ದಾರಿತನವನ್ನು ವಹಿಸಿದ್ದಾರೆ.. ರೈತರು ಪಶು ಪಕ್ಷಿಗಳು ಸೇರಿದಂತೆ ಶ್ರೀಸಾಮಾನ್ಯರಿಗೆ ಬೇಕಾಗಿರುವ ಜೀವನಾಧಾರವಾದ ನೀರನ್ನು ಕಾಲುವೆಗಳ ಮೂಲಕ ಹರಿಸಿ ಕೆರೆಯನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗದ ಅಧಿಕಾರಿಗಳು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕೃಷ್ಣೆಗೌಡ ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ನೀರುಹರಿಸಿ ಕೆರೆಯನ್ನು ತುಂಬಿಸಲು ಮುಂದಾಗಬೇಕು.. ಇಲ್ಲದಿದ್ದರೆ ಹೇಮಾವತಿ ವಿಭಾಗ ಕಚೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿ ಉಗ್ರವಾಗಿ ಪ್ರತಿಪಡಿಸುವುದಾಗಿ ಕೃಷ್ಣೆಗೌಡ ಎಚ್ಚರಿಕೆ ನೀಡಿದರು..
ಅನುವಿನಕಟ್ಟೆ ಗ್ರಾಮದ ಮುಖಂಡ ರಾಮಕೃಷ್ಣೇಗೌಡ, ಅಗ್ರಹಾರ ಬಾಚಹಳ್ಳಿ ಗ್ರಾಮ ಪಂಚಾಯಿತಿ ಮಾಜಿಉಪಾಧ್ಯಕ್ಷ ಫಯಾಜ್ ಉಲ್ಲಾಖಾನ್, ಪುನೀತ್ ನವೀನ್, ಬೋರೇಗೌಡ, ಪುಟ್ಟಸ್ವಾಮಿ, ಚಿಕ್ಕಣ್ಣಗೌಡ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು..

ವರದಿ: ಡಾ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ. ಮಂಡ್ಯ.

error: