May 6, 2024

Bhavana Tv

Its Your Channel

ಕೆ.ಆರ್.ಪೇಟೆ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ನಗರ ನೀರು ಸರಬರಾಜು ಮಂಡಳಿ.

ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 28 ಕೋಟಿ ರೂಪಾಯಿ ವೆಚ್ಚದ 3ನೇಹಂತದ ಕುಡಿಯುವ ನೀರು ಯೋಜನೆ.
ಕೆ.ಆರ್.ಪೇಟೆ : ಪುರಸಭೆ ವ್ಯಾಪ್ತಿಯ 30ಸಾವಿರ ಜನರಿಗೆ ಪ್ರತಿದಿನವೂ ಹೇಮಾವತಿ ನದಿಯಿಂದ ಶುದ್ದೀಕರಿಸಿದ ಪರಿಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡುತ್ತಿರುವ 9 ನಗರಗಳ ಶುದ್ಧಕುಡಿಯುವ ನೀರು ಸರಬರಾಜು ಯೋಜನೆಯು ನಗರ ಮೂಲ ಸೌಕರ್ಯ ಹಣಕಾಸು ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ ತಾಲೂಕಿನ ಮತ್ತಿಘಟ್ಟ ಗ್ರಾಮದ ಎಂ.ಡಿ.ಕೃಷ್ಣಮೂರ್ತಿ ಅವರ ಹೋರಾಟದ ಫಲವಾಗಿ 28ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರಾಗಿತ್ತು. ಕ್ಷೇತ್ರದ ಈ ಹಿಂದಿನ ಶಾಸಕರು ಹಾಗೂ ರಾಜ್ಯದ ಮಾಜಿ ಸಚಿವರಾದ ಡಾ.ನಾರಾಯಣಗೌಡ ಅವರ ಇಚ್ಛಾಶಕ್ತಿಯ ಫಲವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿಯು ಸಂಪೂರ್ಣ ಗೊಂಡಿದ್ದು ಈಗಾಗಲೇ ಕಾರ್ಯಾರಂಭ ಮಾಡಿರುವುದರಿಂದ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ವ್ಯಾಪ್ತಿಯ 23 ವಾರ್ಡುಗಳ ಜನರು ಶುದ್ಧ ಕುಡಿಯುವ ನೀರನ್ನು ಕುಡಿಯುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳುತ್ತಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದಿಂದ 10ಕಿ.ಮೀ ದೂರದಲ್ಲಿರುವ ಹೇಮಗಿರಿಯ ಬಳಿ ಹೇಮಾವತಿ ನದಿಯಿಂದ ನೀರನ್ನು ಪಂಪ್ ಮಾಡಿ ಪ್ರತಿದಿನವೂ ಪಟ್ಟಣದಲ್ಲಿ ವಾಸವಾಗಿರುವ 30ಸಾವಿರಕ್ಕೂ ಹೆಚ್ಚು ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಯು ಮುಂದಿನ 30 ವರ್ಷಗಳ ಜನಸಂಖ್ಯೆಯ ಹೆಚ್ಚಳವನ್ನು ಗುರಿಯನ್ನಾಗಿಸಿಕೊಂಡು ಸಿದ್ಧಪಡಿಸಿರುವ ಯೋಜನೆಯಾಗಿದೆ.

ಕೆ.ಆರ್.ಪೇಟೆ ಪಟ್ಟಣವು ಹೇಮಾವತಿ ನದಿಯಿಂದ ಕೇವಲ 10ಕಿ.ಮೀ ದೂರದಲ್ಲಿದ್ದರೂ ಪಟ್ಟಣದ ಜನರು ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗದ ಕಾರಣದಿಂದಾಗಿ ಪರಿತಪಿಸುತ್ತಿದ್ದುದನ್ನು ಮನಗಂಡ
ಕೆಯುಐಡಿಎಫ್‌ಸಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಮತ್ತಿಘಟ್ಟ ಕೃಷ್ಣಮೂರ್ತಿ ಅವರು ನಿಗಮದಿಂದ 55 ಕೋಟಿ ರೂಪಾಯಿ ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಮಂಜೂರು ಮಾಡಿ 9 ನಗರಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ಅಡಿಯಲ್ಲಿ 28 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆ.ಆರ್.ಪೇಟೆಗೆ
ಕುಡಿಯುವ ನೀರು ಸರಬರಾಜು ಮಾಡುವ ಮೂರನೇ ಹಂತದ ಯೋಜನೆಗೆ ಚಾಲನೆ ನೀಡಿದ್ದರು. ಕುಡಿಯುವ ನೀರು ಸರಬರಾಜು ಯೋಜನೆಯು ಮಾಜಿ ಸಚಿವ ಡಾ.ನಾರಾಯಣಗೌಡರ ಇಚ್ಛಾಶಕ್ತಿಯ ಫಲವಾಗಿ ಆರಂಭ ಗೊಂಡರೆ 20ಕೋಟಿ ರೂಪಾಯಿ ವೆಚ್ಚದ ಒಳಚರಂಡಿ ಯೋಜನೆ ಹಾಗೂ 07ಕೋಟಿ ರೂಪಾಯಿ ವೆಚ್ಚದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಹಾಗೂ 8ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ಧೇಶಿಸಿದ್ದ ಪುರಸಭೆಯ ಕಛೇರಿಯ ಹೈಟೆಕ್ ಕಟ್ಟಡದ ಕಾಮಗಾರಿಯು ಮಾತ್ರ ಆರಂಭವಾಗುವ ಸೂಚನೆಯೇ ಕಾಣು ತ್ತಿಲ್ಲ. ವಾರದ ಎಲ್ಲಾ ಏಳೂ ದಿನಗಳಲ್ಲಿಯೂ ದಿನದ 24 ಗಂಟೆಗಳ ಕಾಲವೂ ಪರಿಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂಬ ಆಶಯದಿಂದ ಆರಂಭವಾದ ಮೂರನೇ ಹಂತದ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯು ಫಲಪ್ರಧವಾಗಿ ಸಂಪೂರ್ಣ ಗೊಂಡಿದೆ . ಕೆ.ಆರ್.ಪೇಟೆ ವ್ಯಾಪ್ತಿಯ 17 ವಾರ್ಡುಗಳು ಹಾಗೂ ಹೊಸಹೊಳಲು ಭಾಗದ 6 ವಾರ್ಡುಗಳಲ್ಲಿ ವಾಸವಾಗಿರುವ 30ಸಾವಿರಕ್ಕೂ ಹೆಚ್ಚಿನ ಜನರಿಗೆ ಪುರಸಭೆಯ ನೀರು ಸರಬರಾಜು ಸಿಬ್ಬಂಧಿಗಳು ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದು ಪಟ್ಟಣದ ಜನತೆ ಕುಡಿಯುವ ನೀರಿನ ಸಮಸ್ಯೆಯಿಲ್ಲದೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಸಾಧುಗೋನಹಳ್ಳಿಯ ಬಳಿ ಬಾಣಂತಿಗುಡ್ಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಿರುವ ನೀರು ಶುದ್ಧೀಕರಣ ಘಕಟವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆ.ಆರ್.ಪೇಟೆ ಪಟ್ಟಣದ ಮುತ್ತುರಾಯಸ್ವಾಮಿ ದೇವಾಲಯದ ಬಳಿ ನಿರ್ಮಿಸಿರುವ 5ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ವಾಟರ್ ಟ್ಯಾಂಕಿನಲ್ಲಿ ಸಂಗ್ರಹವಾಗುವ ನೀರು ಪಟ್ಟಣದ ವಿವಿಧ ಬಡಾವಣೆಗಳಿಗೆ
ಸರಬರಾಜಾಗುತ್ತಿದೆ.

ಈ ಸಂದರ್ಬದಲ್ಲಿ ಎಂ .ಡಿ.ಕೃಷ್ಣಮೂರ್ತಿ, ಕೆಯುಐಡಿಎಫ್‌ಸಿ ಮಾಜಿ ಅಧ್ಯಕ್ಷರು. ಹೇಳಿಕೆ ನೀಡಿ ನಾನು ನಗರ ಹಣಕಾಸು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದಾಗ, ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮನವೊಲಿಸಿ ಒಂದೇ ಕಂತಿನಲ್ಲಿ 55ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿಕೊಟ್ಟು ಕೆ.ಆರ್.ಪೇಟೆ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ 09 ನಗರ ಕುಡಿಯುವ ನೀರು ಸರಬರಾಜು ಕಾರ್ಯಕ್ರಮವನ್ನು ಮಂಜೂರು ಮಾಡಿದ್ದೆ, ಮಾಜಿಸಚಿವ ನಾರಾಯಣಗೌಡರ ಇಚ್ಛಾಶಕ್ತಿಯ ಫಲವಾಗಿ ಇಂದು ಕುಡಿಯುವ ನೀರು ಸರಬರಾಜು ಯೋಜನೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷ ತಂದಿದೆ. ಅಂತೆಯೇ ಪುರಸಭೆಗೆ ಆಧಾಯವನ್ನು ತಂದುಕೊಡುವ ವಾಣಿಜ್ಯ ಸಮುಚ್ಛಯ ಹಾಗೂ ಪುರಸಭಾ ಕಾರ್ಯಲಯದ ಕಟ್ಟಡದ ನಿರ್ಮಾಣವನ್ನು ಆದಷ್ಟು ಜಾಗ್ರತೆ ಆರಂಭಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.

ವರದಿ:ಡಾ. ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ, ಮಂಡ್ಯ

error: