December 22, 2024

Bhavana Tv

Its Your Channel

ಗಿಡ ಮರಗಳನ್ನು ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಿ -ಶಾಸಕ ಡಾ. ಕೆ ಅನ್ನದಾನಿ ಅರಣ್ಯಾಧಿಕಾರಿ ಗಳಿಗೆ ತಾಕೀತು.

ಮಳವಳ್ಳಿ : ವರ್ಷಕ್ಕೊಮ್ಮೆ ಪರಿಸರ ದಿನಾಚರಣೆ ಹೆಸರಿನಲ್ಲಿ ನಮ್ಮಿಂದ ಗಿಡಗಳನ್ನು ನೆಟ್ಟಿಸಿ ಪತ್ರಿಕೆ, ಟಿ ವಿ ಮಾಧ್ಯಮಗಳಿಗೆ ಪೋಜು ನೀಡುವುದನ್ನು ಬಿಟ್ಟು ನಿರಂತರವಾಗಿ ಗಿಡ ಮರಗಳನ್ನು ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಶಾಸಕ ಡಾ. ಕೆ ಅನ್ನದಾನಿ ಅರಣ್ಯಾಧಿಕಾರಿ ಗಳಿಗೆ ತಾಕೀತು ಮಾಡಿದ್ದಾರೆ.
ಅರಣ್ಯ ಇಲಾಖೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗ ದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಕಳೆದ ವರ್ಷ ಸಹ ಇದೇ ರೀತಿ ಪರಿಸರ ದಿನದ ಅಂಗವಾಗಿ ನಮ್ಮಿಂದ ಗಿಡ ನೆಡುವ ಕಾರ್ಯ ಕ್ರಮಕ್ಕೆ ಚಾಲನೆ ಕೊಡಿಸಿದಿರಿ ಆದರೆ ಎಷ್ಟು ಗಿಡಗಳನ್ನು ಎಲ್ಲೆಲ್ಲಿ ಬೆಳೆಸಿದ್ದೀರಿ, ಅವು ಯಾವ ಸ್ಥಿತಿಯಲ್ಲಿವೆ ಎಂಬ ಮಾಹಿತಿಯೇ ಇದುವರೆಗೂ ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇಂತಹ ತೋರಿಕೆಯ ಕಾರ್ಯ ಕ್ರಮಗಳನ್ನು ನಡೆಸುವುದನ್ನು ಬಿಟ್ಟು ಕಳೆದ ಒಂದು ವರ್ಷದಲ್ಲಿ ಎಲ್ಲೆಲ್ಲಿ ಗಿಡ ಬೆಳೆಸಲಾಗದೆ ಎಂಬ ವಿವರ ಕೊಡಿ ಎಂದು ಕೇಳಿದರು.
ಗಿಡ ಮರಗಳು ನೀಡುವ ಆಕ್ಸಿಜನ್ ಮಹತ್ವ ಎಷ್ಟೆಂಬುದು ಈ ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಅರಿವಾಗಿದ್ದು ಗಿಡಮರಗಳ ಮಹತ್ವವನ್ನು ಅರಿತು ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಲು ಒತ್ತು ನೀಡಬೇಕೆಂದು ಅನ್ನದಾನಿ ಕರೆ ನೀಡಿದರು.
ಪುರಸಭಾಧ್ಯಕ್ಷೆ ರಾಧ ನಾಗರಾಜು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ದಲ್ಲಿ ಉಪಾಧ್ಯಕ್ಷ ಟಿ ನಂದಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್, ವಲಯ ಅರಣ್ಯಾಧಿಕಾರಿ ಆಸೀಫ್ ಅಹಮದ್ , ವಲಯ ಅರಣ್ಯಾಧಿಕಾರಿ ರುಕಿಯಾ ಪರ್ವೀನ್, ಉಪ ಅರಣ್ಯಾಧಿಕಾರಿ ಆದರ್ಶಗೌಡ, ಕನ್ನಿಕಾ, ಸಮಾಜ ಕಲ್ಯಾಣಾಧಿಕಾರಿ ನಂಜುAಡೇ ಗೌಡ, ಸೇರಿದಂತೆ ಹಲವಾರು ಪುರಸಭಾ ಸದಸ್ಯರು ಅಧಿಕಾರಿಗಳು ಉಪಸ್ಥಿತಿರಿದ್ದರು.

ವರದಿ : ಬಿ ಮಲ್ಲಿಕಾರ್ಜುನಸ್ಮಾಮಿ. ಮಳವಳ್ಳಿ

error: