December 19, 2024

Bhavana Tv

Its Your Channel

ಕೋವಿಡ್ ಬಗ್ಗೆ ಜಾಗೃತಿ ಸಭೆ

ಮಳವಳ್ಳಿ : ತಾಲ್ಲೂಕಿನ ಬುಗತಗಹಳ್ಳಿ ಗ್ರಾಮದಲ್ಲಿ ಜನವಾದಿ ಮಹಿಳೆ ಸಂಘಟನೆ ಹಾಗೂ ನಗು ಫೌಂಡೇಶನ್ ವತಿಯಿಂದ ಗ್ರಾಮಸ್ಥರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಸಭೆ ನಡೆಸಲಾಯಿತು

ಮಳವಳ್ಳಿ ಸರ್ಕಾರಿ ತರದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುನಿಲ್ ಮಾತನಾಡಿ ಕೋವಿಡ್ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು, ಕೋವಿಡ್ ಬಗ್ಗೆ ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆ ವಹಿಸಿ ಎಂದರು.
ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಬನ್ನಿ , ಗುಂಪು ಸೇರಿದರೆ ಕೋವಿಡ್ ಬರಬಹುದು ಅದಕ್ಕಾಗಿ ಸರ್ಕಾರ ಲಾಕ್ ಡೌನ್ ಮಾಡಿದೆ. ಮುಂದೆ ಲಾಕ್ ಡೌನ್ ತೆರವು ಆದರೂ ಸಹ ಸಾಮಾಜಿಕ ಅಂತರ ಕಾಯ್ದಕೊಳ್ಳವುದನ್ನು ಮುಂದುವರಿಸಿ ಎಂದರು
ಸಭೆಯಲ್ಲಿ ಜನವಾದಿ ಮಹಿಳಾ ಸಂಘಟನೆ ರಾಜ್ಯಾ ಧ್ಯಕ್ಷೆ ದೇವಿ, ತಾಲ್ಲೂಕು ಅಧ್ಯಕ್ಷೆ ಸುಶೀಲ, ಡಾ. ಅರುಣ್ ಕುಮಾರ್ , ತಿಮ್ಮೇಗೌಡ ಸೇರಿದಂತೆ ಮತ್ತಿತರರು ಇದ್ದರು.

ವರದಿ : ಬಿ ಮಲ್ಲಿಕಾರ್ಜುನಸ್ಮಾಮಿ. ಮಳವಳ್ಳಿ

error: