December 22, 2024

Bhavana Tv

Its Your Channel

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರಿಂದ ಪ್ರತಿಭಟನೆ

ಮಳವಳ್ಳಿ : ಕೋವಿಡ್ ಸಂತ್ರಸ್ತರಿಗೆ ಹಾಗೂ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗದವರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲೂಕ ಪಂಚಾಯತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಿಪಿಐಎಂ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಲ್ಲದೆ ಸಿಪಿಐಎಂ ಅದೇಶದಂತೆ ಶಾಸಕರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಬೇಕೆಂಬ ಸೂಚನೆ ಮೇರೆಗೆ ಇಂದು ಮನವಿ ಸ್ವೀಕರಿಸುವಂತೆ ನೆನ್ನೆಯ ಶಾಸಕರನ್ನು ಕೋರಲಾಗಿದ್ದು ಇದಕ್ಕೆ ಶಾಸಕರು ಒಪ್ಪಿದ್ದರಾದರೂ ಇಂದು ಮನವಿ ಕೊಡಲು ಬಂದರೆ ಶಾಸಕರ ಕಚೇರಿಗೆ ಬೀಗ ಹಾಕಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಶಾಸಕರ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ದೇವಿ ಕೋವಿಡ್ ಎರಡನೇ ಅಲೆ ಬಗ್ಗೆ ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ದರು ಸಹ ಮೊದಲೇ ಎಚ್ಚರಿಕೆ ವಹಿಸಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತೆಯಿಂದ ರಾಜ್ಯದಲ್ಲಿ ಸಾವಿರಾರು ಜನ ಕೋವಿಡ್‌ಗೆ ಬಲಿಯಾಗಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಲಕ್ಷಾಂತರ ಜನ ಸಾವು ಬದುಕಿನ ನಡುವೆ ನರಳುವಂತಾಯಿತು ಎಂದು ಆರೋಪಿಸಿದರು.
ಮೃತರು ಹಾಗೂ ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜೊತೆಗೆ ವ್ಯಾಕ್ಸಿನೇಷನ್ ನೀಡಿಕೆಯಲ್ಲಿ ಸಹಾ ಸರ್ಕಾರಗಳು ಜಾತಿ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುತ್ತಿದ್ದು ಜೊತೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಯಾವುದೇ ಪರಿಹಾರ ಅನುದಾನವನ್ನು ನೀಡದೆ ಕೇವಲ ೧೦ ಕೆ ಜಿ ಮುಗ್ಗಲು ಅಕ್ಕಿ ನೀಡಿ ಕೈ ತೊಳೆದು ಕೊಂಡಿದೆ ಎಂದು ಕಿಡಿ ಕಾರಿದರು.
ಕೂಡಲೇ ಈ ನೀತಿಯನ್ನು ಕೈಬಿಟ್ಟು ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಪೂರೈಕೆ ಮಾಡಬೇಕು, ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬ ಗಳಿಗೆ ತಲಾ ೧೦ ಸಾವಿರ ರೂ ಪರಿಹಾರ ನೀಡಬೇಕು, ಉದ್ಯೋಗ ಖಾತ್ರಿ ಕೂಲಿಯನ್ನು ೪೦೦ ರೂ ಗಳಿಗೆ ಹೆಚ್ಚಿಸಬೇಕು ಎಂಬ ದೇವಿ ಆಗ್ರಹಿಸಿದರು.
ಈ ಕುರಿತ ಮನವಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಜಿ ರಾಮಕೃಷ್ಣ, ಸುಶೀಲ, ಸುನೀತಾ, ತಿಮ್ಮೇಗೌಡ. ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ಬಿ ಮಲ್ಲಿಕಾರ್ಜುನಸ್ಮಾಮಿ. ಮಳವಳ್ಳಿ

error: