December 20, 2024

Bhavana Tv

Its Your Channel

ಜೆಡಿಎಸ್ ಪಕ್ಷದ ಅಧ್ಯಕ್ಷ ಟಿ ಎಂ. ಗುರುಸ್ವಾಮಿಗೆ ಶ್ರದ್ಧಾಂಜಲಿ

ಮಳವಳ್ಳಿ : ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ತಾಲೂಕಿನ ಜೆ ಡಿ ಎಸ್ ಪಕ್ಷದ ಬಿ ಜಿ ಪುರ ಹೋಬಳಿ ಘಟಕದ ಅಧ್ಯಕ್ಷರಾಗಿದ್ದ ಟಿ ಎಂ ಗುರುಸ್ವಾಮಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆ ಪಟ್ಟಣದ ಪ್ರವಾಸಿ ಮಂದಿರದ ಆವರಣ ದಲ್ಲಿ ಇಂದು ಜರುಗಿತು.
ಸಭೆಯಲ್ಲಿ ಗುರುಸ್ವಾಮಿ ಅವರ ಭಾವಚಿತ್ರಕ್ಕೆ ಶಾಸಕ ಡಾ ಕೆ ಅನ್ನದಾನಿ ಹಾಗೂ ಹಲವಾರು ಜೆಡಿಎಸ್ ಮುಖಂಡರು ಪುಷ್ಪಾರ್ಚನೆ ಜೊತೆಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಾ. ಕೆ ಅನ್ನದಾನಿ ಅವರು ನಮ್ಮ ಜೆಡಿಎಸ್ ಪಕ್ಷದ ಬಿ. ಜಿ. ಪುರ ಹೋಬಳಿ ಘಟಕದ ಅಧ್ಯಕ್ಷ ರಾಗಿ ಸ್ಥಳೀಯ ವ್ಯವಸಾಯ ಸಹಕಾರ ಸಂಘದ ನಿರ್ದೇಶಕರಾಗಿ ಪಕ್ಷದ ಪ್ರಾಮಾಣಿಕ ಕಟ್ಟಾಳುವಾಗಿದ್ದ ತೆಂಕಹಳ್ಳಿ ಟಿ ಎಂ. ಗುರುಸ್ವಾಮಿ ಅವರ ಅಕಾಲಿಕ ನಿಧನ ಅಪಾರವಾದ ನೋವು ತಂದಿದೆ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದರು.
ಪಕ್ಷದ ೪ ಮಂದಿ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದು ಕೊಂಡಿದ್ದೇವೆ ಎಂದು ವಿಷಾದಿಸಿದ ಅವರು ಪಕ್ಷಕ್ಕಾಗಿ ಹಗಲಿರುಳು ದುಡಿದ ಗುರುಸ್ವಾಮಿ ಎಲ್ಲೂ ಕೂಡ ಪಕ್ಷಕ್ಕೆ ಕಳಂಕ ತರುವ ಕಾರ್ಯ ಮಾಡಿಲ್ಲ, ಅದನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ ಎಂದು ಹೇಳಿದರು.
ಗುರುಸ್ವಾಮಿ ಅವರ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ತಿಳಿಸಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸ್ವಾಮಿ ಸೇರಿದಂತೆ ಕೋವಿಡ್ ಸೋಂಕಿನಿAದ ಅಗಲಿದ ಪಕ್ಷದ ನಿಷ್ಠಾವಂತ ಮುಖಂಡರಾದ ಕೆಂಪಯ್ಯನ ದೊಡ್ಡಿ ಗಣೇಶ್, ಗಾಜನೂರು ಮಹೇಶ್, ಧನಗೂರು ಇಲಿಯಾಜ್ ಪಾಷಾ ಅವರು ಗಳನ್ನು ಉಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರೂ ಫಲಕಾರಿಯಾಗಲಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ, ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಟಿ. ನಂದ ಕುಮಾರ್, ಸದಸ್ಯ ವಡ್ಡರಹಳ್ಳಿ ಸಿದ್ದರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲೇಗೌಡ ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಹಿಂದುಳಿದ ಘಟಕದ ಅಧ್ಯಕ್ಷ ಸಿದ್ಧಚಾರಿ, ಮಾಜಿ ತಾ. ಪಂ. ವಿರೋಧ ಪಕ್ಷದ ನಾಯಕ ಪುಟ್ಟಸ್ವಾಮಿ, ಮಾಜಿ ಪುರಸಭೆ ಸದಸ್ಯ ಮೆಹಬೂಬ್ ಪಾಷಾ, ಮುಖಂಡರಾದ ಪೊತಂಡೆ ನಾಗರಾಜು, ಮೆಡಿಕಲ್ ಕುಮಾರ್, ಸೇರಿದಂತೆ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಉಪಸ್ಥಿತರಿದ್ದರು
ವರದಿ : ಬಿ ಮಲ್ಲಿಕಾರ್ಜುನಸ್ಮಾಮಿ. ಮಳವಳ್ಳಿ

error: