ಮಳವಳ್ಳಿ : ರಾಜ್ಯದಲ್ಲಿ ಇನ್ನೂ ಸಹ ಕೋವಿಡ್ ಸೋಂಕಿನ ಹಾವಳಿ ಮುಂದುವರಿದಿದ್ದು ಜನ ಆಸ್ಪತ್ರೆ, ಬೆಡ್, ಆಕ್ಸಿಜನ್, ವೆಂಟಿಲೇಟರ್‌ಗಾಗಿ ಪರಿತಪ್ಪಿಸುತ್ತಿರುವಾಗ ಬಿಜೆಪಿಯ ಸಚಿವರು ಶಾಸಕರು ಸಂಕಷ್ಟದಲ್ಲಿರುವ ಜನರನ್ನು ಮರೆತು ಮುಖ್ಯಮಂತ್ರಿಯ ಬದಲಾವಣೆಗಾಗಿ ರಾಜಕೀಯ ಕೆಸರೆರಚಾಟದಲ್ಲಿ ಮುಳುಗಿರುವುದು ಇದೊಂದು ರಾಜಕೀಯ ಹುಚ್ಚಾಟ ಎಂದು ಶಾಸಕ ಡಾ. ಕೆ ಅನ್ನದಾನಿ ಟೀಕಿಸಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಗ್ರಾಮದಲ್ಲಿ ಸುಮಾರು ೨೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಓವರ್ ಹೆಡ್ ಟ್ಯಾಂಕ್ ಅನ್ನು ಉದ್ಘಾಟಿಸುವುದರ ಜೊತೆಗೆ ಗ್ರಾಮದಲ್ಲಿನ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಲಿಸುವ ಜೆ ಜೆ ಎಂ ಯೋಜನೆ ಕಾಮಗಾರಿಗೆ ಚಾಲನೆ ನೀಡಿದರಲ್ಕದೆ ನೂತನವಾಗಿ ನಿರ್ಮಾಣ ಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿರುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯವಾಗಿದ್ದು ಮುಖ್ಯಮಂತ್ರಿ ಯಾರೇ ಇರಲಿ ಇನ್ನು ಒಂದೆರಡು ತಿಂಗಳು ಕಳೆದ ಕೋವಿಡ್ ಅವಾಂತರ ಮುಗಿದ ಮೇಲೆ ಇವರ ರಾಜಕೀಯ ಮಾಡಿಕೊಳ್ಳಲಿ ಅದು ಬಿಟ್ಟು ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ದೆಹಲಿಯಿಂದ ಉಸ್ತುವಾರಿ ಕರೆಯಿಸಿ ಅವರ ಮುಂದೆ ಪರ ವಿರೋಧದ ಪೆರೇಡ್ ನಡೆಸಲು ಆಡಳಿತ ರೂಢ ಮಂತ್ರಿಗಳು ಶಾಸಕರು ಮುಂದಾಗಿರುವುದು ಸರಿಯಾದ ನಡೆ ಅಲ್ಲ ಇದೊಂದು ರಾಜಕೀಯ ಹುಚ್ಚಾಟ ಎಂದು ಲೇವಡಿ ಮಾಡಿದರು.
ಮಳವಳ್ಳಿ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖ ವಾಗುತ್ತಿದ್ದು ಇಂತಹ ಸಂದರ್ಭದಲ್ಲಿ ೨೧ ರಿಂದ ಜಿಲ್ಲೆಯಲ್ಲಿ ಏಕಾಏಕಿ ಲಾಕ್ ಡೌನ್ ಹಿಂತೆಗೆದು ಕೊಳ್ಳುವುದು ಸರಿಯಲ್ಲ ಎಂದು ಹೇಳಿದ ಶಾಸಕರು ಈ ತಿಂಗಳ ಕೊನೆವರೆವಿಗೂ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಲಾಕ್ ಡೌನ್ ಜೊತೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಕುಡಿಯುವ ನೀರು ಯೋಜನೆಗೆ ಯಾವುದೇ ಅಡಚಣೆ ಆಗಬಾರದು ಎಂಬ ಸರ್ಕಾರದ ನಿಯಮದಂತೆ ಪಂಡಿತಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು ಗ್ರಾಮದ ಜನ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಗ್ರಾ ಪಂ ಅಧ್ಯಕ್ಷ ಸ್ವಾಮಿ, ಮುಖಂಡರಾದ ತಿಮ್ಮೇಗೌಡ, ವೆಂಕಟೇಗೌಡ, ಯೋಗೀಶ್, ಇಂಜಿನಿಯರ್ ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ