December 22, 2024

Bhavana Tv

Its Your Channel

ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಭಾರತೀಯ ಸಮಾಜ ಕಾರ್ಯ ಸಂಸ್ಥೆ ವತಿಯಿಂದ ಆರೋಗ್ಯ ಕಿಟ್ ವಿತರಣೆ.

ಮಳವಳ್ಳಿ ; ಕರೋನ ಸಂಕಷ್ಟದ ನಡುವೆ ತಮ್ಮ ಕರ್ತವ್ಯವನ್ನು ಚಾಚು ತಪ್ಪದೆ ನಿರ್ವಹಿಸುತ್ತಿರುವ ಪತ್ರಕರ್ತರು ಹಾಗೂ ವಿತರಕರ ಕೆಲಸ ಬಹಳ ಶ್ಲಾಘನೀಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷ ರಾದ ಎನ್ ಎಲ್ ಭರತ್ ರಾಜ್ ತಿಳಿಸಿದ್ದಾರೆ.
ಅವರು ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮದಲ್ಲಿ ಬಿ ಜಿ ಪುರ ಹೋಬಳಿಯ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಭಾರತೀಯ ಸಮಾಜ ಕಾರ್ಯ ಸಂಸ್ಥೆ ವತಿಯಿಂದ ಆರೋಗ್ಯ ಕಿಟ್ ವಿತರಿಸಿ ಮಾತನಾಡುತ್ತಿದ್ದರು.
ಕರೋನ ತಡೆಗಟ್ಟುವ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹಾಕಿ ಕೂತರೆ ನಮ್ಮ ಜೀವ ಉಳಿಯುವುದಿಲ್ಲ ಹಾಗಾಗಿ ಎಲ್ಲರ ಆರೋಗ್ಯ ರಕ್ಷಣೆ ವಿಷಯದಲ್ಲಿ ಪ್ರತಿಯೊಬ್ಬರು ತನ್ನದೆಯಾದ ಸೇವೆ ಸಲ್ಲಿಸಬೇಕು. ಬಹಳ ಜನ ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಅವರಿಗೂ ಸಹಾಯ ಮಾಡುವ ಮನಸ್ಥಿತಿಯನ್ನು ಹೆಚ್ಚೆಚ್ಚು ಮಂದಿ ಅಳವಡಿಸಿ ಕೊಳ್ಳಬೇಕು ಸರ್ಕಾರ ಕೇರಳ ಮಾದರಿಯಲ್ಲಿ ಪ್ಯಾಕೇಜ್ ಘೋಷಿಸಿಸ ಬೇಕೆಂದರು.
ಭಾರತೀಯ ಸಮಾಜ ಕಾರ್ಯ ಸಂಸ್ಥೆಯ ಟ್ರಸ್ಟಿ ಶಿವರಾಜು ಮತ್ತು ಅವರ ಗೆಳೆಯರ ಕೆಲಸ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಬೆಳಕವಾಡಿ ಸರ್ಕಾರಿ ಆಸ್ಪತ್ರೆಯ ಡಾ. ವರ್ಣಿತ, ಪಿಡಿಓ ಶಿವಸ್ವಾಮಿ ವಿಧಾನ ಸೌಧದ.ಕಂದಾಯ ಇಲಾಖೆಯ ನಿವೃತ್ತ ಅದಿಕಾರಿಗಳಾದ ರಾಜು, ಹಾಗೂ ಪ್ರಾಂತ ರೈತ ಸಂಘದ ಮುಖಂಡರಾದ ಗುರುಸ್ವಾಮಿ ಮಲ್ಲಿಕಾರ್ಜುನಸ್ವಾಮಿ. ಆನಂದಸ್ವಾಮಿ. ದ್ರುವ . ರವಿ ಡಿವೈಐಫ್ಐ.ಮುಖಂಡರಾದ ಚಂದ್ರು. ಉಪಸ್ಥಿತಿರಿದ್ದರು

ವರದಿ : ಬಿ‌. ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.

error: