December 22, 2024

Bhavana Tv

Its Your Channel

ಕೋವಿಡ್ ಕೇರ್ ಸೆಂಟರ್‌ನಲ್ಲಿ ಗಾನಸುಧೆ ಕಾರ್ಯಕ್ರಮ

ಮಳವಳ್ಳಿ : ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೋನ ಸೋಂಕಿತರಿಗೆ ತಮ್ಮ ಗಾನಸುಧೆಯ ಮೂಲಕ ಮನರಂಜಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಡೆಸುತ್ತಿರುವ ಶಾಸಕ ಡಾ. ಕೆ ಅನ್ನದಾನಿ ಅವರು ನೆನ್ನೆ ರಾತ್ರಿ ತಾಲೂಕಿನ ಚೆನ್ನಪಿಳ್ಳೆ ಕೊಪ್ಪಲು ಗ್ರಾಮದ ಬಳಿಯ ಮುರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಸಹ ಹಾಡುವುದರ ಜೊತೆಗೆ ತಮ್ಮ ಹಾಡಿಗೆ ತಾವೇ ನೃತ್ಯ ಮಾಡುವ ಮೂಲಕ ಕೋವಿಡ್ ಸೋಂಕಿತರಿಗೆ ಮನೋರಂಜನೆ ನೀಡಿ ಅವರಲ್ಲಿ ನವೋಲ್ಲಾಸವನ್ನು ತುಂಬಿದ ಪ್ರಸಂಗ ಜರುಗಿತು.
ಹಾಡಿನ ಜೊತೆಗೆ ಸ್ವತಃ ನೃತ್ಯ ಮಾಡುತ್ತಿರುವ ಶಾಸಕರ ನಡೆಯಿಂದ ಪ್ರೇರಿತರಾದ ಕೋವಿಡ್ ಸೋಂಕಿತರು ಸಹ ಚಪ್ಪಾಳೆ ನೃತ್ಯ ಮಾಡುವ ಮೂಲಕ ತಮ್ಮ ಚಿಂತೆ ದುಃಖಗಳನ್ನು ಮರೆತು ಮನೋರಂಜನೆ ಅನುಭವಿಸಿದರು. ಸೋಂಕಿತ ಯುವತಿಯೊಬ್ಬ ಳು ಶಾಸಕರ ಮಲೇ ಮಹದೇಶ್ವರನ ಹಾಡಿಗೆ ಮೈಮರೆತು ಭಾವಪರಶಳಾಗಿ ನೃತ್ಯ ಮಾಡುತ್ತಿದ್ದ ನೆರೆದಿದ್ದವರ ನ್ನು ಮೂಕವಿಸ್ಮಿತರನ್ನಾಗಿಸಿತ್ತು .
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅನ್ನದಾನಿ ಅವರು ಸಂಗೀತಕ್ಕೆ ಎಂತಹ ನೋವು ಸಂಕಟವನ್ನು ಮರೆಸುವ ಶಕ್ತಿ ಇದೇ ಎಂಬುದನ್ನು ಅರಿತ ನಾನು ಮೊದಲು ಇಡೀ ರಾಜ್ಯದಲ್ಲೇ ಪ್ರಪ್ರಥಮವಾಗಿ ಮಳವಳ್ಳಿಯ ಕೋವಿಡ್ ಸೆಂಟರ್‌ಗಳಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಆರಂಭಿಸಿದೆ. ಈಗ ರಾಜ್ಯಾದ್ಯಂತ ಕೋವಿಡ್ ಸೆಂಟರ್ ಗಳಲ್ಲಿ ಇಂತಹ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು..
ಕೋವಿಡ್ ಸೋಂಕಿತರಿಗೆ ಮೊದಲು ಅವರ ಮನಸ್ಸಿನಲ್ಲಿ ಆವರಿಸಿರುವ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವುದು ಅತಿ ಮುಖ್ಯವಾಗಿದ್ದು ಇದಕ್ಕೆ ಇಂತಹ ಸಂಗೀತ ಮನೋರಂಜನಾ ಕಾರ್ಯಕ್ರಮ ಸಹಕಾರಿಯಾಗ ಲಿದೆ ಎಂದು ಹೇಳಿದ ಅನ್ನದಾನಿ ನೀವು ಸಂಪೂರ್ಣ ಗುಣಮುಖರಾಗಿ ಮನೆಗೆ ಹಿಂತಿರುಗುವವರೆವಿಗೂ ನಿಮ್ಮ ಅರೋಗ್ಯ ರಕ್ಷಣೆ ನಮ್ಮ ಹೊಣೆಯಾಗಿದ್ದು ಬೆದರಿಕೆಯನ್ನು ಬಿಟ್ಟು ದೈರ್ಯವಾಗಿರಿ ಎಂದು ಸೋಂಕಿತರಿಗೆ ಭರವಸೆ ತುಂಬಿದರು.
ನAತರ ನಡೆದ ರಸಮಂಜರಿ ಕಾರ್ಯಕ್ರಮ ದಲ್ಲಿ ” ಸಿರಿವಂತ ನಾದರೂ ಕನ್ನಡ ನಾಡಲ್ಲಿ ಮೆರೆವೇ ” ಎಂಬ ಕನ್ನಡ ಗೀತೆ ಯನ್ನು ಹಾಡಿದ ಶಾಸಕರು ಇದಾದ ನಂತರ ” ನಿನ್ನ ನೆನೆದ ಜೀವನ ಆಯಿತಲ್ಲ ಪಾವನ ” ಎಂಬ ಮಹದೇಶ್ವರನ ಭಕ್ತಿ ಗೀಯನ್ನು ಹಾಡುತ್ತಲೇ ಸ್ವತಃ ನೃತ್ಯ ಮಾಡಲು ಆರಂಭಿಸಿದರೆ ಶಾಸಕರ ನೃತ್ಯದಿಂದ ಪ್ರೇರಿತರಾಗಿ ಸೋಂಕಿತರು ಸಹ ತಮ್ಮ ಚಿಂತೆ ನೋವು ಮರೆತು ಹಾಡಿಗೆ ಹೆಜ್ಜೆ ಹಾಕಿದ ದೃಶ್ಯ ಅದೊಂದು ಕೋವಿಡ್ ಕೇರ್ ಸೆಂಟರ್ ಎಂಬ ವಾತಾವರಣ ವನ್ನು ಮರೆಸುವಂತಿತ್ತು.
ಕಾರ್ಯಕ್ರಮ ದಲ್ಲಿ ತಾ. ಪಂ ಸದಸ್ಯರಾದ ಪುಟ್ಟಸ್ವಾಮಿ, ನಟೇಶ್, ಪುರಸಭಾ ಸದಸ್ಯ ವಡ್ಡರಹಳ್ಳಿ ಸಿದ್ದರಾಜು, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಚಂದಹಳ್ಳಿ ಶ್ರೀಧರ್, ಮತ್ತಿತರರು ಪಾಲ್ಗೊಂಡಿದ್ದರು..

ವರದಿ : ಬಿ‌. ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.

error: