December 22, 2024

Bhavana Tv

Its Your Channel

ಮಗಳ ಆತ್ಮಹತ್ಯೆ ಸುದ್ದಿ ತಿಳಿದು ಹೃದಯಾಘಾತದಿಂದ ತಂದೆ ಸಾವು

ಮಳವಳ್ಳಿ : ಮಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಆಘಾತದಿಂದ ಹೃದಯಾಘಾತ ಕ್ಕೆ ಒಳಗಾದ ತಂದೆ ಸಹ ಸಾವನ್ನಪ್ಪಿದ ದುರಂತ ಘಟನೆ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಜರುಗಿದೆ.

ಈ ಗ್ರಾಮದ ಕಾಂಗ್ರೆಸ್ ಮುಖಂಡ ರಾಜು ಎಂಬುವರ ಮಗಳಾದ ೧೭ ವರ್ಷದ ಭಾಂದವ್ಯ ರವಿವಾರ ಮುಂಜಾನೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ. ಈಕೆಯ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ ೯೨ ರಷ್ಟು ಅಂಕ ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಭಾಂದವ್ಯ ಪ್ರಥಮ ಪಿಯುಸಿ ಯನ್ನು ಸರ್ಕಾರಿ ಕಾಲೇಜಿನಲ್ಲಿ ಮುಗಿಸಿದ್ದು ದ್ವಿತೀಯ ಪಿಯುಸಿಗೆ ಖಾಸಗಿ ಕಾಲೇಜಿಗೆ ಸೇರಿಸುವಂತೆ ಪಟ್ಟು ಹಿಡಿದೆಳೆನ್ನ ಲಾಗಿದೆ.
ಆದರೆ ತನ್ನ ಸಧ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ನಿನ್ನನ್ನು ಖಾಸಗಿ ಕಾಲೇಜಿಗೆ ಸೇರಿಸಲಾಗದು ಎಂದು ರಾಜು ಅವರು ಖಡಾ ಖಂಡಿತವಾಗಿ ಹೇಳುತ್ತಿದ್ದಂತೆ ರಾತ್ರಿ ಕೆಲ ಹೊತ್ತಿನ ವರೆವಿಗೂ ತಂದೆ ಮಗಳ ನಡುವೆ ಇದೇ ವಿಚಾರವಾಗಿ ಬಿರುಸಿನ ಚೆರ್ಚೆ ನಡೆದಿತ್ತು ಎನ್ನಲಾಗಿದೆ.
ಇದರಿಂದ ಜಿಗುಪ್ಸೆಗೊಂಡ ಭಾಂದವ್ಯ ತನ್ನ ಕೊಠಡಿಯಲ್ಲಿ ಮಧ್ಯ ರಾತ್ರಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಬೆಳಿಗ್ಗೆ ಆಕೆಯ ಕೊಠಡಿ ಬಾಗಿಲು ತೆಗೆದು ನೋಡಿದಾಗಲೇ ಈ ವಿಚಾರ ಬೆಳಿಕಿಗೆ ಬಂದಿದೆ.
ಮಗಳ ಸಾವಿನಿಂದ ತೀವ್ರ ದುಃಖಿತರಾದ ರಾಜು ಅವರು ಈ ಅಪಘಾತಕ್ಕೆ ಒಳಗಾದ ಕಾರಣ ರಕ್ತದೊತ್ತಡದಲ್ಲಿ ತೀವ್ರ ಕುಸಿತ ಉಂಟಾಗಿ ಅಸ್ವಸ್ತರಾದ ಇವರನ್ನು ಕೂಡಲೇ ಮಳವಳ್ಳಿ ಅಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.
ಮೊದಲೇ ಮಗಳ ಸಾವಿನಿಂದ ದುಃಖದ ಮಡುವಿನಲ್ಲಿ ಮುಳುಗಿದ್ದ ಕುಟುಂಬ ಇದೇ ಬೆನ್ನಲ್ಲೇ ಮನೆಯ ಯಜಮಾನ ಸಹ. ಮೃತಪಟ್ಟ ಸುದ್ದಿ ಬರ ಸಿಡಿಲಿನಂತೆ ಬಂದೆರಗುತ್ತಿದ್ದAತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಇಂದು ಮಧ್ಯಾಹ್ನ ಗ್ರಾಮದ ಅವರ ಜಮೀನಿನಲ್ಲಿ ತಂದೆ ಮಗಳಿಬ್ಬರ ಅಂತ್ಯಕ್ರಿಯೆಯನ್ನು ಅಕ್ಕಪಕ್ಕದಲ್ಲಿ ನೆರವೇರಿಸ ಲಾಗಿದೆ.

ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.

error: