December 22, 2024

Bhavana Tv

Its Your Channel

ನರೇಗಾ ಯೋಜನೆ ಅಡಿ ಅರ್ಧ ದಿನ ಕೆಲಸದ ಬಳಿಕ ಕೆಲಸ ಇಲ್ಲ ಎಂದು ಉಡಾಪೆ ಹೇಳಿಕೆ, ಪಂಚಾಯತಿ ಎದುರು ಕೂಲಿಕಾರರ ಪ್ರತಿಭಟನೆ

ಮಳವಳ್ಳಿ : ನರೇಗ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರನ್ನು ಅರ್ಧ ದಿನ ಕೆಲಸ ಮಾಡಿದ ನಂತರ ನಿಮಗೆ ಕೆಲಸ ಇಲ್ಲ ಮನೆಗೆ ಹೋಗಿ ಎಂದು ಪಂಚಾಯ್ತಿ ಅಧಿಕಾರಿಗಳು ಕೂಲಿಕಾರರನ್ನು ಮನೆಗೆ ಕಳುಹಿಸಿದ ಪ್ರಸಂಗ ತಾಲ್ಲೂಕಿನ ನಾಗೇಗೌಡನ ದೊಡ್ಡಿ ಗ್ರಾ ಪಂ ಜರುಗಿದ್ದು ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಕೂಲಿಕಾರರು ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದರು. ನರೇಗ ಯೋಜನೆಯಡಿ ಉದ್ಯೋಗ ಕೋರಿ ನಾಗೇಗೌಡನ ದೊಡ್ಡಿ ಗ್ರಾಮದ ಕೂಲಿಕಾರರು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇವರಿಗೆ ಕೂಲಿ ಅನುಮೋದನೆ ನೀಡುವ ಫಾರಂ ನಂ೬ನ್ನು ನೀಡಿ ಎರಡು ತಿಂಗಳಾದರೂ ಇನ್ನೂ ಉದ್ಯೋಗ ನೀಡಿಲ್ಲ ಎನ್ನಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಇರುವ ಗ್ರಾಮೀಣ ಭಾಗದ ಜನರಿಗೆ ನರೇಗ ಯೋಜನೆಯಡಿ ಕೂಲಿ ಒದಗಿಸಬೇಕೆಂಬುದು ಜಿಲ್ಲಾಡಳಿತದ ಗುರಿಯಾಗಿದ್ದು ಈ ಪಂಚಾಯಿತಿ ಯಲ್ಲಿ ಮಾತ್ರ ಫಾರಂ ೬ ನ್ನು ನೀಡಿದ್ದರು ಸಹ ಕಳೆದ ಎರಡು ತಿಂಗಳಿAದ ಕೂಲಿಕಾರರಿಗೆ ಯಾವ ಉದ್ಯೋಗವನ್ನು ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕೂಲಿಕಾರರು ಆರೋಪಿಸಿದ್ದಾರೆ.
ಈ ಕುರಿತು ಗ್ರಾಪಂ ಸದಸ್ಯರನ್ನು ಪ್ರಶ್ನಿಸಿದಾಗ ನೀವು ಇಂದಿನಿAದ ಕೆಲಸ ಮಾಡಿ ನಾನು ಕೂಲಿ ಕೊಡಿಸುತ್ತೇನೆ ಎಂದು ತಿಳಿಸಿದ್ದರಂತೆ. ಅದರಂತೆ ಇಂದು ಕೆಲಸಕ್ಕೆ ತೆರಳಿದ ಗ್ರಾಮದ ೩೦ಕ್ಕೂ ಹೆಚ್ಚು ಕೂಲಿಕಾರರು ಮದ್ಯಾಹ್ನ ೧೨.೩೦ ರವರೆವಿಗೂ ಕೆಲಸ ನಿರ್ವಹಿಸುತ್ತಿದ್ದು ಈ ವೇಳೆ ಸ್ಥಳಕ್ಕೆ ಬಂದ ಪಂಚಾಯಿತಿ ಇಂಜೀನಿಯರ್ ಅವರು ನಿಮಗೆ ಇನ್ನೂ ಜಿಪಿಎಫ್ ಆಗಿಲ್ಲ ಇಂದು ಕೆಲಸ ಮಾಡಬೇಡಿ ಮನೆಗೆ ಹೋಗಿ ಎಂದು ಹೇಳಿದರಂತೆ. ವಿಷಯ ತಿಳಿದ ತಾಲ್ಲೂಕು ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲಯ್ಯ ಎಲ್ಲಾ ಕೂಲಿಕಾರರ ಜೊತೆ ಪಂಚಾಯಿತಿ ಕಚೇರಿ ಬಳಿ ಆಗಮಿಸಿ ಅಧಿಕಾರಿಗಳ ವರ್ತನೆ ಖಂಡಿಸಿ ಪ್ರತಿಭಟನೆ ನಡೆಸಿದರಲ್ಲದೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಸ್ಥಳಕ್ಕೆ ಬಂದ ಗ್ರಾ ಪಂ ಅಧ್ಯಕ್ಷೆ ಭಾಗ್ಯಮ್ಮ ಅವರ ಪತಿ ಪ್ರಭು ಅವರು ನೀವು ಪ್ರತಿಭಟನೆ ಮಾಡಿ ಅದೇನು ಕಿತ್ತಿಕೊಳ್ಳುತ್ತೀರೋ ಕಿತ್ತುಕೊಳ್ಳಿ ಎಂದು ಕೂಲಿಕಾರರ ಕುರಿತು ಉದ್ಘಟತನದ ಮಾತುಗಳನ್ನು ಆಡಿದರು ಎಂದು ಕೂಲಿಕಾರರು ಅರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಶಿವಮಲ್ಲಯ್ಯ ಅವರು ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಪಂಚಾ ಯಿತಿಯಲ್ಲೂ ನರೇಗ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗ ಒದಗಿಸುತ್ತಿರುವಾಗ ಈ ಪಂಚಾಯಿತಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದ ಕೂಲಿಕಾರರ ನ್ನು ಅರ್ಧಕ್ಕೆ ವಾಪಸ್ ಕಳುಹಿಸಿರುವುದು ಇವರ ಬೇಜವಾಬ್ದಾರಿ ತನಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿ ಕಾರಿದರು.
ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ವಿರುದ್ಧ ಉದ್ಘಟತನದ ವರ್ತನೆ ತೋರಿ ಏನು ಕಿತ್ತುಕೊಳ್ಳುತ್ತೀರ ಕಿತ್ತುಕೊಳ್ಳ ಎಂದು ಅವಾಚ್ಯ ಶಬ್ದಗಳ ಬಳಕೆ ಮಾಡಿರುವ ಗ್ರಾ ಪಂ ಅಧ್ಯಕ್ಷ ರ ಪತಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಅವರು ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು. ಅಧ್ಯಕ್ಷರ ಪತಿ ಕೂಲಿಕಾರರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕೂಲಿಕಾರರ ಸಂಘದ ಮುಖಂಡ ರಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.

error: