December 21, 2024

Bhavana Tv

Its Your Channel

ಮದ್ದೂರು ತಾಲ್ಲೂಕಿನ ವಿವಿಧೆಡೆ ಕಾಣಿಸಿಕೊಂಡ ಮೂರು ಕಾಡಾನೆಗಳು

ಮಳವಳ್ಳಿ: ಕಳೆದ ಮೂರು ದಿನಗಳ ಹಿಂದೆ ಮದ್ದೂರು ತಾಲ್ಲೂಕಿನ ವಿವಿಧೆಡೆ ಕಾಣಿಸಿಕೊಂಡಿದ್ದ ಮೂರು ಕಾಡಾನೆಗಳು ತಾಲ್ಲೂಕಿನ ನೆಲ್ಲೂರು ಗ್ರಾಮದೊಳಗೆ ಬೆಳಂಬೆಳಗ್ಗೆ ಪತ್ತೆಯಾಗಿ ಜನರಲ್ಲಿ ಆತಂಕವನ್ನು ಉಂಟು ಮಾಡಿವೆ.
ತಾಲ್ಲೂಕಿನ ಮುತ್ತಿತ್ತಿ ಅರಣ್ಯ ಪ್ರದೇಶದಿಂದ ಆಹಾರ ಹರಸಿ ನಾಡಿನತ್ತ ಬಂದಿದ್ದ ಮೂರು ಕಾಡಾನೆಗಳು ಮದ್ದೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿದ್ದವು. ಬುಧವಾರ ರಾತ್ರಿ ಕೊಕ್ಕರೆ ಬೆಳ್ಳೂರಿನಿಂದ ತಾಲ್ಲೂಕಿನ ನೆಲ್ಲೂರು ಗ್ರಾಮದ ಮೂಲಕ ಕಲ್ಲುವೀರನಹಳ್ಳಿ-ಕಂದೇಗಾಲದ ಜವನೇಗೌಡ ಎಂಬುವವರ ಕಬ್ಬಿನಗದ್ದೆಯಲ್ಲಿ ಕಾಣಿಸಿ ಕೊಂಡಿವೆ.
ಆನೆಗಳನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಆಸೀಫ್ ಅಹಮದ್ ನೇತೃತ್ವದ ತಂಡ ಸ್ಥಳದಲ್ಲಿಯೇ ಮೊಕ್ಕಾಂ ಹೊಡಿದ್ದು . ಕಾಡಾನೆಗಳು ಹಾವಳಿಯಿಂದ ಅಕ್ಕ ಪಕ್ಕದ ಗ್ರಾಮಗಳ ಜನರಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿದೆ.
ಆನೆಗಳನ್ನು ಸಂಜೆ ೫ ಗಂಟೆಯ ನಂತರ ಕಾಡಿಗೆ ಓಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಆನೆಗಳನ್ನು ನೋಡಲು ಸಾಗರೋಪಾ ದಿಯಲ್ಲಿ ಜನರು ಆಗಮಿಸಿದ್ದು, ಗ್ರಾಮಾಂತರ ಪೊಲೀಸರು ಬಿಗಿಭದ್ರತೆ ಕಲ್ಪಿಸಿದ್ದಾರೆ.

ವರದಿ ಮಲ್ಲಿಕಾರ್ಜುನ ಮಳವಳ್ಳಿ

error: