ಮಳವಳ್ಳಿ : ದೊಡ್ಡ ದೊಡ್ಡ ಐಟಿ ಬಿಟಿ ಕಂಪನಿಗಳಿAದ ಹಿಡಿದು ಸಣ್ಣಪುಟ್ಟ ಹೋಟೆಲ್‌ಗಳ ಮುಂದೆ ನಿಲ್ಲುವ ಸೆಕ್ಯುರಿಟಿ ಗಾರ್ಡ್ಗಳು ಸಹ ಕತ್ತಿಗೆ ಐಡೆಂಟಿಟಿ ಕಾಡ್೯ ನೇತುಹಾಕಿಕೊಳ್ಳುವ ಈ ಕಾಲದಲ್ಲಿ ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕೂಲಿಕಾರರು ಗುರುತಿನ ಚೀಟಿ ಹಾಕಿದರೆ ತಪ್ಪೇನು?
ಇಂತಹದೊAದು ಕಲ್ಪನೆಯ ಅಪರೂಪದ ರಾಜ್ಯದಲ್ಲೇ ಪ್ರಥಮ ಎನ್ನಬಹುದಾದ ಕೂಲಿಕಾರರಿಗೂ ಐಡೆಂಟಿಟಿ ಕಾಡ್೯ ವಿತರಣೆಯ ಕಾರ್ಯಕ್ರಮವೊಂದು ತಾಲೂಕಿನ ಬಂಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಾರೆ ಪುರ ಗ್ರಾಮದಲ್ಲಿ ಜರುಗಿತು.
ಈ ಗ್ರಾಮದ ೪೦ಕ್ಕೂ ಹೆಚ್ಚು ಮಂದಿ ಕೂಲಿಕಾರರು ನರೇಗ ಯೋಜನೆಯಡಿ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದು ಈ ಕೂಲಿಕಾರರಿಗೆ ಗುರುತಿನ ಚೀಟಿ ನೀಡಿದರೆ ಹೇಗೆ ಎಂಬ ಕಲ್ಪನೆ ಈ ಕೂಲಿಕಾರರ ತಂಡದ ಕಾಯಕ ಬಂಧುವಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಚುಂಚಯ್ಯ ಅವರಿಗೆ ಹೊಳೆದು ಈ ಆಲೋಚನೆಯನ್ನು ಪತ್ರಕರ್ತ ಮಾಗನೂರು ಎಂ ಶಿವಕುಮಾರ್ , ಗ್ರಾ ಪಂ ಪಿಡಿಒ ಕುಮಾರ್ ಸೇರಿದಂತೆ ಕೆಲ ಪ್ರಮುಖರ ಸಲಹೆ ಸಹಕಾರ ದೊಂದಿಗೆ ಇಂದು ಈ ಕಲ್ಪನೆಯನ್ನು ಕಾರ್ಯಗತಗೊಳಿಸಿದರು.
ಕಲ್ಲಾರೆಪುರ – ಗಾಣಗನಪುರ ಗ್ರಾಮದ ನಡುವೆ ನಡೆಯುತ್ತಿರುವ ಕಾಲುವೆ ನಿರ್ಮಾಣದ ಕಾಮಗಾರಿ ಸ್ಥಳದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪತ್ರಕರ್ತ ಮಾಗನೂರು ಎಂ ಶಿವಕುಮಾರ್ ಅವರು ಕೂಲಿಕಾರರಿಗೆ ಗುರುತಿನ ಚೀಟಿಗಳನ್ನು ಕೂಲಿಕಾರರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಜವಾನನಿಂದ ದಿವಾನನವರೆವಿಗೂ ಹಾಕಿ ಕೊಳ್ಳುವ ಈ ಐಡೆಂಟಿಟಿ ಕಾಡ್೯ನ್ನು ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿ ಕೊಂಡಿರುವ ನರೇಗ ಯೋಜನೆಯ ಕೂಲಿ ಕಾರ್ಮಿಕರು ಹಾಕಿಕೊಳ್ಳಬಾರದೇಕೆ ಎಂಬ ಶಿಕ್ಷಕ ಚುಂಚಯ್ಯ ಅವರ ಆಲೋಚನೆ ನಿಜಕ್ಕೂ ಪ್ರಶಂಸೆನೀಯ ವಾಗಿದ್ದು ಈ ಕಾರಣದಿಂದ ಈ ಕಾರ್ಯಕ್ಕೆ ಬೆಂಬಲ ನೀಡಿದ್ದಾಗಿ ತಿಳಿಸಿದ ಅವರು ಕೂಲಿಕಾರರ ಇಂತಹ ಪ್ರಗತಿಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ ಪಂ ಪಿಡಿಓ ಕುಮಾರ್ ಅವರು ಕೂಲಿಕಾರರಿಗೆ ಗುರುತಿನ ಪತ್ರ ನೀಡುವ ಕಾರ್ಯ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದಲ್ಲೇ ಪ್ರಥಮ ವಾಗಿದ್ದು ಈ ಕಾರ್ಯ ಪ್ರಶಂಸನೀಯ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಸ್ವಚ್ಚತಾ ಕಾರ್ಯದ ಬಗ್ಗೆ ಪಿಡಿಓ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕಾಯಕಬಂಧು ಚುಂಚಯ್ಯ ಅವರು ಗುರುತಿನ ಚೀಟಿ ಜೊತೆಗೆ ಮುಂದೆ ಉತ್ತಮ ಕೂಲಿ ಕಾರ್ಮಿಕ ಪ್ರಶಸ್ತಿ ನೀಡುವ ಗುರಿ ಹೊಂದಿರುವು ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿಗ್ರಾ ಪಂ ಉಪಾಧ್ಯಕ್ಷ ರಮೇಶ್, ಪಂಚಾಯಿತಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ