December 22, 2024

Bhavana Tv

Its Your Channel

ರಸ್ತೆ ಬದಿಗೆ ನುಗ್ಗಿದ ಲಾರಿ ,ಬೈಕ್‌ಗಳಿಗೆ ಡಿಕ್ಕಿ

ಮಳವಳ್ಳಿ : ಅಡ್ಡಾದಿಡ್ಡಿ ಓಡಿದ ಲಾರಿಯೊಂದು ರಸ್ತೆ ಬದಿಗೆ ನುಗ್ಗಿ ಕಾರು ಹಾಗೂ ಬೈಕ್ ಗಳಿಗೆ ಡಿಕ್ಕಿ ಹೊಡೆದು ಜಖಂ ಗೊಳಿಸದ ಘಟನೆ ನಿನ್ನೆ ಮಧ್ಯಾಹ್ನ ಮಳವಳ್ಳಿ ಪಟ್ಟಣದಲ್ಲಿ ಜರುಗಿದೆ.
ಮಧ್ಯಾಹ್ನ ಸುಮಾರು ೨.೩೦ ರ ಸಮಯದಲ್ಲಿ ಕೊಳ್ಳೇಗಾಲ ಕಡೆಯಿಂದ ವೇಗವಾಗಿ ಬರುತ್ತಿದ್ದ ಈ ಲಾರಿ ಪಟ್ಟಣದ ಕೆ ಸರ್ಕಲ್ ಬಳಿ ಏಕಾಏಕಿ ರಸ್ತೆ ಬದಿಗೆ ನುಗ್ಗಿ ನಿಂತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ನಂತರ ಎರಡು ಬೈಕ್ ಗಳ ಮೇಲೆ ಹರಿಯಿತು ಎನ್ನಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದ ಜನ ಹೆದರಿ ದಿಕ್ಕಾಪಾಲಾಗಿ ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಈ ಘಟನೆಯಲ್ಲಿ ಒಂದು ಕಾರು ಹಾಗೂ ಮೂರು ಬೈಕ್ ಗಳು ಜಖಂ ಗೊಂಡಿದ್ದು ರಸ್ತೆ ಬದಿಯಲ್ಲಿ ನಿಂತಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಹೆಚ್ಚಿನ ಅನಾಹುತ ವಾಗಿಲ್ಲ.
ಲಾರಿ ಚಾಲಕನಿಗೆ ಆಗಾಗ್ಗೆ ಮೂರ್ಛೆ ರೋಗ ಕಾಣಿಸಿಕೊಳ್ಳುತ್ತಿದ್ದು ನಿನ್ನೆ ಲಾರಿ ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಸಹ ಮೂರ್ಛೆ ರೋಗದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಚಾಲಕ ಲಾರಿಯನ್ನು ರಸ್ತೆ ಬದಿಗೆ ನಿಲ್ಲಿಸಲು ಹೋದಾಗ ಈ ಅವಘಡ ಸಂಭವಿಸಿದೆ ಎಂದು ಗೊತ್ತಾಗಿದೆ.

ವರದಿ ಮಲ್ಲಿಕಾರ್ಜುನ ಮಳವಳ್ಳಿ

error: