December 22, 2024

Bhavana Tv

Its Your Channel

ಶ್ರೀ ಪಟ್ಟಲದಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಮೆಂಬರ್ ಶಿಫ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಉಚಿತ ಕೋವಿಡ್ ಲಸಿಕೆ.

ಮಳವಳ್ಳಿ : ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯಲ್ಲಿ ಇರುವ ಶ್ರೀ ಪಟ್ಟಲದಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಮೆಂಬರ್ ಶಿಫ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಕ್ಲಬ್ ನ ಸದಸ್ಯರು ಕುಟುಂಬಸ್ಥರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ರಾಪಿಡ್ ಟೆಸ್ಟ್ ಜೊತೆಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಲಬ್ ನ ಆವರಣದಲ್ಲಿ ಆರೋಗ್ಯ ಇಲಾಖೆಯ ಸಹ ಯೋಗದೊಂದಿಗೆ ಹಮ್ಮಿಕೊಳ್ಳ ಲಾಗಿದ್ದ ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡು ನೂರಾರು ಮಂದಿ ಕ್ಲಬ್‌ನ ಸದಸ್ಯರು ಕುಟುಂಬದವರು ಹಾಗೂ ಸಾರ್ವಜನಿಕರಿಗೆ ರಾಪಿಡ್ ಟೆಸ್ಟ್ ನಡೆಸಿ ನಂತರ ಕೋವಿಡ್ ಲಸಿಕೆ ನೀಡಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರು ಸಹ ಹಾಜರಿದ್ದು ಜನರು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೋವಿಡ್ ಲಸಿಕೆ ಪಡೆಯುವಂತೆ ವೈದ್ಯಕೀಯ ಸಿಬ್ಬಂದಿಗೆ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಲಬ್‌ನ ಅಧ್ಯಕ್ಷ ಯತಿರಾಜ್, ಪದಾಧಿಕಾರಿಗಳಾದ ಹನುಮಂತರಾಜು, ರವಿಕುಮಾರ್ , ಶಿವಕುಮಾರ್ ಲಾಕ್ ಡೌನ್ ಸಂದರ್ಭದಲ್ಲಿ ಕ್ಲಬ್ ವತಿಯಿಂದ ನೂರಾರು ಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು ಇದೀಗ ಕ್ಲಬ್ ನ ಕುಟುಂಬಸ್ಥರ ಜೊತೆಗೆ ಸಾರ್ವಜನಿಕರಿಗೆ ಸಹ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಉಚಿತವಾಗಿ ಕೋವಿಡ್ ರಾಪಿಡ್ ಟೆಸ್ಟ್ ಮಾಡಿಸುವುದರ ಜೊತೆಗೆ ಉಚಿತವಾಗಿ ಕೋವಿಡ್ ಲಸಿಕೆ ಸಹ ಹಾಕಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಮುಂದೆ ಸಹ ನಮ್ಮ ಕ್ಲಬ್ ವತಿಯಿಂದ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವು ದಾಗಿ ತಿಳಿಸಿದರು.
ಈ ಸಂದರ್ಭದಲ್ಲಿಪದಾಧಿಕಾರಿಗಳಾದ ಎಂ ವಿ ಹನುಮಂತರಾಜು, ಪಿ ಮಂಜುನಾಥ್, ಎಂ ಎಸ್ ರವಿ, ಗಂಗಾ ಪರಮೇಶ್ವರಿ ಸೊಸೈಟಿ ಮಾಜಿ ಅಧ್ಯಕ್ಷ ಚಿಕ್ಕಮೊಗಣ್ಣ ಮತ್ತಿತರರು ಹಾಜರಿದ್ದರು.

ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ

error: