ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಗಟ್ಟಿಕೊಪ್ಪಲು ಗ್ರಾಮದ ಶ್ರೀ ಬಸವೇಶ್ವರ ಕೊಂಡೋತ್ಸವ ಮಂಗಳವಾರ ಸಡಗರ ಸಂಭ್ರಮದಿAದ ಜರುಗಿತು.
ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕೊಂಡೋತ್ಸವವನ್ನು ಲಾಕ್ ಡೌನ್ ತೆರವಾಗಿರುವುದರ ಜೊತೆಗೆ ಕೋವಿಡ್ ಸಹ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕೊಂಡೋತ್ಸವವನ್ನು ನಡೆಸಲು ಗ್ರಾಮದ ಮುಖಂಡರು ಕೈಗೊಂಡ ತೀರ್ಮಾನದಂತೆ ಕೊಂಡೋತ್ಸವ ಜರುಗಿತು.
ಸೋಮವಾರ ರಾತ್ರಿಯೇ ಕೊಂಡೋತ್ಸವ ನಡೆಯ ಬೇಕಿತ್ತಾದರೂ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮಂಗಳವಾರ ಬೆಳಿಗ್ಗೆ ಕೊಂಡ ಜರುಗಿತು.
ದೇವಾಲಯದಿಂದ ಮೆರವಣಿಗೆ ಹೊರಟ ಬಸವೇಶ್ವರ ಉತ್ಸವ ಮೂರ್ತಿ ಗ್ರಾಮದ ಪ್ರಮುಖ ಬೀದಿಗಳ ಹಾದು ಕೊಂಡದ ಸ್ಥಳ ತಲುಪುತ್ತಿದ್ದಂತೆ ದೇವರ ಅರ್ಚಕ ಕೊಂಡ ಹಾಯುವುದ ರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು ಉತ್ಸವ ಶಾಂತಿಯುತವಾಗಿ ಜರುಗಿತು.
ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ