December 22, 2024

Bhavana Tv

Its Your Channel

ಆಗಸ್ಟ್ ೧೫ಕ್ಕೆ ಬೃಹತ್ ರಕ್ತದಾನ ಶಿಬಿರ

ಮಳವಳ್ಳಿ: ಕೋವಿಡ್ ಸೋಂಕಿನಿoದ ಮುಂದೂಲ್ಪಟ್ಟಿದ್ದ ಬೃಹತ್ ರಕ್ತದಾನ ಶಿಬಿರವನ್ನು ಆಗಸ್ಟ್ ೧೫ರಂದು ಆಯೋಜಿಸಲು ಮಳವಳ್ಳಿ ಯುವಕ ಮಿತ್ರರ ಬಳಗ ತೀರ್ಮಾನಿಸಿದೆ.
ಈ ಕುರಿತು ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು. ಪಟ್ಟಣದ ರಂಗನಾಥ ಕಾಂಪ್ಲೆಕ್ಸ್ ನಲ್ಲಿ ನಡೆದ ಸಭೆಯಲ್ಲಿ ೫೦ಕ್ಕೂ ಸಂಘಟನೆಯ ಸದಸ್ಯರು ಭಾಗಿಯಾಗಿ ಕಳೆದ ಏಪ್ರಿಲ್ ೨೬ರಂದು ಹಮ್ಮಿಕೊಂಡಿದ್ದ ಶಿಬಿರವನ್ನು ಕೋವಿಡ್ ಪರಿಣಾಮ ಲಾಕ್ ಡೌನ್ ನಿಂದಾಗಿ ಮುಂದೂಡಿಕೆ ಮಾಡಿದ್ದ ಈ ಕಾರ್ಯ ಕ್ರಮವನ್ನು ಆ.೧೫ರಂದು ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರೋಟರಿ ಶಾಲೆಯ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಈ ಶಿಬಿರದ ಸಂಘಟಕರಲ್ಲಿ ಒಬ್ಬರಾದ ಪೊಲೀಸ್ ಪ್ರಭು ಅವರು ಕಳೆದ ೨೦೧೮ ರಲ್ಲಿ ೧೦೭೪ ಮಂದಿ ರಕ್ತದಾನ ಮಾಡುವ ಮೂಲಕ ಮಳವಳ್ಳಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರಕ್ತದಾನ ಮಾಡಿದ ದಾಖಲೆ ನಿರ್ಮಿಸಿದ್ದು ಬರುವ ಆಗಸ್ಟ್ ೧೫ ರಂದು ಸಂವಿಧಾನ ಶಿಲ್ಪಿ , ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ, ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮೀಜಿ, ಭಗವಾನ್ ಮಹಾವೀರ, ವರನಟ ಡಾ.ರಾಜ್ ಕುಮಾರ್, ನಾಡಪ್ರಭು ಕೆಂಪೇಗೌಡ ಅವರುಗಳ ಗೌರವಾರ್ಥವಾಗಿ ಏರ್ಪಡಿಸುತ್ತಿರುವ ರಕ್ತದಾನ ಶಿಬಿರದಲ್ಲಿ ಹಿಂದಿನ ದಾಖಲೆಯನ್ನು ನಾವೇ ಮುರಿಯುವಂತೆ ಅತಿ ಹೆಚ್ಚು ಮಂದಿ ರಕ್ತದಾನ ಮಾಡುವಂತೆ ಎಲ್ಲರು ಜವಾಬ್ದಾರಿಯನ್ನು ಹೊತ್ತು ಶ್ರಮಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಎಲ್. ಭರತ್ ರಾಜ್, ಎಂ ಎನ್ ಮಹೇಶ್ ಕುಮಾರ್, ತಳಗವಾದಿ ಪ್ರಕಾಶ್, ಶಿವಪ್ರಸಾದ್ ದುಗ್ಗನಹಳ್ಳಿ ನಾಗರಾಜ್ ಮತ್ತಿತರರು ಮಾತನಾಡಿ, ಮಹನೀಯರ ಜಯಂತಿ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದ್ದು ಕೋವಿಡ್ ನಿಂದ ರಕ್ತ ಸಂಗ್ರಹ ಕಡಿಮೆಯಾಗಿದೆ. ಹಲವಾರು ಪ್ರಾಣಗಳನ್ನು ಉಳಿಸುವ ನಿಟ್ಟಿನಲ್ಲಿ ರಕ್ತದ ಅವಶ್ಯಕತೆ ಬಹಳ ಇದೆ. ಹೀಗಾಗಿ ತಾಲ್ಲೂಕಿನ ಎಲ್ಲಾ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ವಂತೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಯುವಕ-ಮಿತ್ರರು ಇದ್ದರು.

ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ

error: