December 22, 2024

Bhavana Tv

Its Your Channel

ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ

ಮಳವಳ್ಳಿ : ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ವೃದ್ದನೊಬ್ಬನ ಶವ ಮಳವಳ್ಳಿ ತಾಲೂಕಿನ ಮಳವಳ್ಳಿ – ಮದ್ದೂರು ಮುಖ್ಯ ರಸ್ತೆಯ ಹೊಂಬೇಗೌಡನ ದೊಡ್ಡಿ ಬಳಿಯ ೧೦ನೇ ಮೈಲಿ ಕಲ್ಲು ಬಳಿ ಪತ್ತೆಯಾಗಿದೆ.
ಮೂಲತಃ ಮಂಡ್ಯ ತಾಲ್ಲೂಕು ತಂಡಸಹಳ್ಳಿ ಗ್ರಾಮದ ವಾಸಿಯಾದ ೭೫ ವರ್ಷ ವಯಸ್ಸಿನ ಜೋಗಿಗೌಡ ಎಂಬುವರೇ ಮೃತಪಟ್ಟ ವೃದ್ದರಾಗಿದ್ದು ಕಳೆದ ೫ರಂದು ಮನೆಯಿಂದ ಹೊರ ಹೋದವರು ವಾಪಸ್ಸು ಮನೆಗೆ ಬಂದಿರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಂದಿನಿAದಲೂ ಇವರಿಗಾಗಿ ಮನೆಯವರು ಹುಡುಕಾಟ ನಡೆಸುತ್ತಿರುವಾಗಲೇ ಇವರ ಶವ ನಿನ್ನೆ ಮಧ್ಯಾಹ್ನ ೧೦ನೇ ಮೈಲಿ ಕಲ್ಲು ಬಳಿಯ ವಿ ಸಿ ನಾಲೆಯಲ್ಲಿ ಪತ್ತೆಯಾಗಿದೆ.
ಬಹುಶಃ ಅಂದು ಬಹಿರ್ದೆಸೆ ಮುಗಿಸಿ ನೀರು ತೆಗೆದುಕೊಳ್ಳಲು ಕಾಲುವೆಗೆ ಇಳಿದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಸತ್ತಿರಬಹುದೆಂದು ಶಂಕಿಸಲಾಗಿದೆ.
ಸAಪೂರ್ಣ ಕೊಳೆತ ಸ್ಥಿತಿಯಲ್ಲಿ ಸಿಕ್ಕಿರುವ ಶವದ ಮಹಜರು ನಡೆಸಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: