ಮಳವಳ್ಳಿ ; ರಾಕ್ ಲೈನ್ ವೆಂಕಟೇಶ್ ಅವರೇ ಮಂಡ್ಯ ಜಿಲ್ಲೆಯ ವಿಚಾರಕ್ಕೆ ಬಂದರೆ ಜನ ನಿಮ್ಮನ್ನು ಪೋಕ್ ಲೈನ್ ಮಾಡಿಬಿಡುತ್ತಾರೆ ಹುಷಾರ್ . ಇದು ಶಾಸಕ ಡಾ. ಕೆ ಅನ್ನದಾನಿ ಅವರು ಕನ್ನಡ ಚಿತ್ರರಂಗದ ಖ್ಯಾತ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ನೀಡಿದ ಖಡಕ್ ಎಚ್ಚರಿಕೆ.
ಮಳವಳ್ಳಿ ತಾಲ್ಲೂಕಿನ ಕಲ್ಯಾಣಿ ಕೊಪ್ಪಲು ಗ್ರಾಮದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡುತ್ತಿದ್ದ ಅವರು ಮಂಡ್ಯ ಜಿಲ್ಲೆಯ ಬಗ್ಗೆ ಮಾತನಾಡಲು ನೀವು ಯಾರು , ಈ ಜಿಲ್ಲೆಯ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಎರಡು ಬಾರಿ ಈ ರಾಜ್ಯವನ್ನು ಆಳಿರುವ ಒಬ್ಬ ಮಾಜಿ ಮುಖ್ಯ ಮಂತ್ರಿ ಬಗ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಹರಿಹಾಯ್ದ ಅನ್ನದಾನಿ ಮಂಡ್ಯ ಜಿಲ್ಲೆಯ ಬಗ್ಗೆ ಮಾತನಾಡಲು ಅಂಬರೀಶಣ್ಣನವರ ಕುಟುಂಬ ಹಾಗೂ ಸುಮಕ್ಕ ಅವರಿಗೆ ಅಧಿಕಾರ ಇದೆಯೇ ಹೊರತು ನಿಮಗೂ ಈ ಜಿಲ್ಲೆಗೂ ಯಾವುದೇ ಸಂಬAಧ ಇಲ್ಲ, ನೀವು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿರಬಹುದು ಅಷ್ಟೇ ಹೊರತು ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ಇಷ್ಟಕ್ಕೂ ಸುಮಲತಾ ಅವರ ಪರ ಮಾತನಾಡಲು ನೀವು ಯಾರು, ಅವರಿಗೂ ನಿಮಗೂ ಇರುವ ಸಂಬAಧವೇನು ಎಂದು ಖಾರವಾಗಿ ಪ್ರಶ್ನಿಸಿದರು.
ಚಿತ್ರ ನಿರ್ಮಾಪಕರರಾಗಿ ನಿಮ್ಮ ಇತಿಮಿತಿಗಳನ್ನು ಅರಿತು ಕೊಂಡು ಮಾತನಾಡ ಬೇಕೆ ಹೊರತು ನಿಮ್ಮ ಮಿತಿಯನ್ನು ಮೀರಿ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ರಾಕ್ ಲೈನ್ ಗೆಚ ಶಾಸಕ ಅನ್ನದಾನಿ ಖಡಕ್ ಎಚ್ಚರಿಕೆ ನೀಡಿದರು. ಮಾತನಾಡ ಬೇಕೆ ಹೊರತು ನಿಮ್ಮ ಮಿತಿಯನ್ನು ಮೀರಿ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ರಾಕ್ ಲೈನ್ ಗೆಚ ಶಾಸಕ ಅನ್ನದಾನಿ ಖಡಕ್ ಎಚ್ಚರಿಕೆ ನೀಡಿದರು.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ