December 22, 2024

Bhavana Tv

Its Your Channel

ವಿವಿಧ ಬೇಡಿಕೆ ಈಡೇರಿಸುವಂತೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನೆ

ಮಳವಳ್ಳಿ :- ೧೮ ತಿಂಗಳ ತುಟ್ಟಿಭತ್ಯ ಬಿಡುಗಡೆ, ಎಲ್ಲರಿಗೂ ಉಚಿತ ವ್ಯಾಕ್ಸೀನ್, ಎನ್ ಪಿ ಎಸ್ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು, ಖಾಲಿ ಇರುವ ಹುದ್ದೆ ಗಳನ್ನು ಭರ್ತಿ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಮಳವಳ್ಳಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನಾ ದಿನ ಆಚರಿಸಿದರು. ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಸಮಾವೇಶಗೊಂಡ ಒಕ್ಕೂಟದ ನೌಕರರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ಕೆ ಪಿ ರಾಜು , ಪ್ರಧಾನ ಕಾರ್ಯದರ್ಶಿ ಜಿ ವಿ ಶಿವಕುಮಾರ್, ಎಂ ಎನ್ ಖಜಾಂಚಿ ಶೈಲಜ ರವರುಗಳು ಕೋವಿಡ್ ಪರಿಹಾರಕ್ಕಾಗಿ ಮುಟ್ಟುಗೋಲು ಹಾಕಿಕೊಂಡಿದ್ದ ೧೮ ತಿಂಗಳ ತುಟ್ಟಿಭತ್ಯೆ ಬಿಡುಗಡೆ ಗೊಳಿಸಿಲ್ಲ, ನೂತನ ಪಿಂಚಣಿ ಯೋಜನೆಯಿಂದ ನೌಕರರು ನಿಶ್ಚಿತ ಪಿಂಚಣಿಯನ್ನು ಕಳೆದು ಕೊಂಡಿದ್ದು ಇದರ ಜೊತೆಗೆ ಖಾಸಗೀಕರಣ ಮತ್ತು ಆಡಳಿತ ಸುಧಾರಣೆ ಹೆಸರಿನಲ್ಲಿ ಲಕ್ಷಾಂತರ ಹುದ್ದೆಗಳನ್ನು ಕಡಿತ ಗೊಳಿಸುವ ಹುನ್ನಾರ ನಡೆದಿದೆ ಎಂದು ಕಿಡಿ ಕಾರಿದರು. ಗುತ್ತಿಗೆ ಹೊರಗುತ್ತಿಗೆ ನೇಮಕಾತಿ ಯಿಂದ ಖಾಯಂ ನೇಮಕಾತಿಗೆ ಹೊಡೆತ ಬಿದ್ದಿದ್ದು ಈ ಪದ್ದತಿಯನ್ನು ಕೈಬಿಟ್ಟು ಸದರಿ ನೌಕರರನ್ನು ಖಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿದರು.
೧೮ ತಿಂಗಳ ತುಟ್ಟಿಭತ್ಯ ಬಿಡುಗಡೆ ಮಾಡಬೇಕು, ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ಹಾಕಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು, ಕಡ್ಡಾಯ ನಿವೃತ್ತಿ ನೀತಿ ಕೈಬಿಡ ಬೇಕು ಮುಂತಾದ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು,.
ಪ್ರತಿಭಟನೆಯಲ್ಲಿ ಎನ್ ಮಹದೇವು, ಪಾಪಾಣ್ಣ, ಶೋಭಾ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: