December 22, 2024

Bhavana Tv

Its Your Channel

ಕರೋನಾ ವಾರಿಯರ್ಸ್ ಗಳಿಗೆ ಅಭಿನಂದನಾ ಕಾರ್ಯಕ್ರಮ

ಮಳವಳ್ಳಿ: ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಮಂಡ್ಯ ಕೆನರಾ ಬ್ಯಾಂಕ್ ಮಳವಳ್ಳಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರು ಹಿತರಕ್ಷಣಾ ಸಮಿತಿ ಪ್ರವಾಸಿತಾಣ ಮಂಡ್ಯ ಪತ್ರಿಕೆ ಇವರ ಸಂಯುಕ್ತ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತಿ ಮತ್ತು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಮಳವಳ್ಳಿ ತಾಲೂಕು ಕಿರಿಯ ತಾಂತ್ರಿಕ ಟೆಕ್ನಿಷಿಯನ್ ವಾರಿಯರ್ಸ್ ಮತ್ತು ವೈದ್ಯರುಗಳಿಗೆ ಅಭಿನಂದನಾ ಕಾರ್ಯಕ್ರಮ ಮಳವಳ್ಳಿ ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಆಯೋಜಕರಾದ ಪತ್ರಕರ್ತ ಹಾಗೂ ಅಖಿಲ ಕರ್ನಾಟಕ ಸಿರಿಗನ್ನಡದ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾದ ಎಂ ಲೋಕೇಶ್ ರವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಎಲ್ಲರಿಗೂ ಶುಭಕೋರಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು ನಂತರ ಘನ ಉಪಸ್ಥಿತಿ ವಹಿಸಿದ್ದ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ವನಿತಾ ಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ತಮ್ಮ ಸೇವೆ ಅನನ್ಯವಾಗಿದೆ ಮತ್ತು ತಮ್ಮಗಳ ಸೇವೆ ನಿರಂತರವಾಗಿ ನಡೆಯಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ನಂತರ ಕಾರ್ಯಕ್ರಮ ಉದ್ಘಾಟನಾ ಭಾಷಣವನ್ನು ಎಚ್ ಆರ್ ಅಶೋಕ್ ಕುಮಾರ್ ಮಾತನಾಡಿ ವೈದ್ಯರು ಕೋವಿಡ್ ೧೯ ರ ಸಂದರ್ಭದಲ್ಲಿ ವೈದ್ಯರ ಸೇವೆ ಶ್ಲಾಘನೀಯವಾದದ್ದು ಮತ್ತು ಅವರ ಕರ್ತವ್ಯವನ್ನು ಬಹಳ ಶ್ರದ್ಧೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವುದಕ್ಕೆ ತಮ್ಮೆಲ್ಲರಿಗೂ ಗುರುತಿಸಿ ಸಂಘ-ಸAಸ್ಥೆಗಳು ಅಭಿನಂದಿಸಿದು ಸಂತೋಷಕರವಾದ ಸಂಗತಿಯೆoದು ತಿಳಿಸಿ ನಾಡಪ್ರಭು ಕೆಂಪೇಗೌಡರು ದೂರ ದೃಷ್ಟಿಕೋನ ಇಟ್ಟುಕೊಂಡು ಬೆಂಗಳೂರನ್ನು ಕಟ್ಟಿದರು ಇವತ್ತು ಎಲ್ಲಾ ವರ್ಗದ ಜನರು ವಾಸಿಸುತಿದ್ದಾರೆ ನಾವೆಲ್ಲ ಅವರಿಗೆ ದಿನಾಚರಣೆ ಆಚರಿಸುವುದು ನಮ್ಮಗಳ ಕರ್ತವ್ಯ ಎಂದು ತಿಳಿಸಿ ಅದೇರೀತಿ ಪತ್ರಿಕ ಮಾಧ್ಯಮದವರು ಅವರನ್ನು ಸಹ ಕೋವಿಡ್ ಸಂದರ್ಭದಲ್ಲಿ ಅವರ ಪ್ರಾಣವನ್ನು ಹಂಗನ್ನು ತೊರೆದು ಎಲ್ಲಾ ಕಡೆ ಚಿತ್ರೀಕರಣ ಮಾಡಿ ಸಾರ್ವಜನಿಕರಿಗೆ ಮತ್ತು ರಾಜ್ಯದ ಜನತೆಗೆ ತಲುಪಿಸುವಲ್ಲಿ ಬಹಳ ಪಾತ್ರವಹಿಸಿದ್ದಾರೆ ಆದ್ದರಿಂದ ಸರ್ಕಾರ ಇವರನ್ನು ಫ್ರಂಟ್ಲೈನ್ ವಾರಿಯರ್ಸ್ ಎಂದು ಪರಿಗಣಿಸಿದೆ ಎಂದರು
ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ಭಾವಚಿತ್ರಕ್ಕೆ ವನಿತಾ ಶ್ರೀ ಮತ್ತು ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು ನಂತರ ಎಲ್ಲಾ ವಾರಿಯರ್ಸ್ ಗಳನ್ನು ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ಡಾಕ್ಟರ್ ವೀರಭದ್ರಪ್ಪ ಮತ್ತು ಡಾಕ್ಟರ್ ಶಶಿಧರ್ ಮತ್ತು ಸುನಿಲ್ ರವರನ್ನು ಅಭಿನಂದಿಸಲಾಯಿತು ನಂತರ ಅಧ್ಯಕ್ಷರ ಭಾಷಣವನ್ನು ಡಾಕ್ಟರ್ ವೀರಭದ್ರಪ್ಪ ಮಾತನಾಡಿ ಒಂದನೇ ಅಲೆಯಿಂದ ಎರಡನೆಯ ವರೆಗೆ ಕೆಲಸ ಸತತವಾಗಿ ನಿರ್ವಹಿಸುತ್ತಿರುವ ನಮ್ಮ ಆರೋಗ್ಯ ಇಲಾಖೆಯ ಟೆಕ್ನಿಷಿಯನ್ಸ್ ಗಳನ್ನು ಸಂಘ-ಸAಸ್ಥೆಗಳು ಅಭಿನಯಿಸುತ್ತಿರುವುದು ಸಂತೋಷಕರವಾದ ವಿಷಯ ಎಂದು ತಿಳಿಸಿ ಸಂಘ-ಸAಸ್ಥೆಗಳಿಗೆ ಧನ್ಯವಾದಗಳು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ವನಿತಾ ಶ್ರೀ ಎಂ ಲೋಕೇಶ ವೀರಭದ್ರಪ್ಪ ಶಶಿಧರ್ ಪುರಸಭಾ ಸದಸ್ಯ ರವಿ ಅಶೋಕ್ ಕುಮಾರ್ ಸುನಿಲ್ ಕುಮಾರ್ ಜಯಶೀಲ ಶಿವಕುಮಾರ್ ನಾಜಿಮ್ ಭರತ್ ನಟ ಇನ್ನು ಮುಂತಾದವರು ಭಾಗವಹಿಸಿದರು

ವರದಿ ಲೋಕೇಶ ಮಳವಳ್ಳಿ

error: