December 21, 2024

Bhavana Tv

Its Your Channel

ವಿಷಪೂರಿತ ಹಾವು ಕಚ್ಚಿ ರೈತನೋರ್ವ ಸ್ಥಳದಲ್ಲೇ ಸಾವು

ಮಳವಳ್ಳಿ : ವಿಷಪೂರಿತ ಹಾವು ಕಚ್ಚಿ ರೈತನೋರ್ವ ಸ್ಥಳದಲ್ಲೇ ಸಾವನ್ಮಪ್ಪಿದ ದುರ್ಘಟನೆಯೊಂದು ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ವಾಸಿಯಾದ ಟಿ ಸಿ ಚೌಡಯ್ಯ ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದು ಇಂದು ಬೆಳಿಗ್ಗೆ ೮.೩೦ ಕ್ಕೆ ತಮ್ಮ ಜಮೀನಿನ ಕಬ್ಬಿನ ಪೈರಿಗೆ ಕಳೆನಾಶಕ ಕ್ರಿಮಿನಾಶಕವನ್ನು ಸಿಂಪಡಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.ಹಿಮ್ಮುಖವಾಗಿ ಕ್ರಿಮಿನಾಶಕ ವನ್ನು ಸಿಂಪಡಿಸಿಕೊAಡು ಹೋಗುತ್ತಿದ್ದ ಚೌಡಯ್ಯ ರಿಗೆ ಕಬ್ಬಿನ ಸಾಲಿನ ಮಧ್ಯ ಮಲಗಿದ್ದ ನಾಗರಹಾವು ಕಚ್ಚಿತೆನ್ನಲಾಗಿದೆ.
ಇದರಿಂದ ಅಸ್ವಸ್ಥರಾದ ಇವರನ್ನು ಮಳವಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟರೆಂದು ವರದಿ ಯಾಗಿದೆ.
ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಚೌಡೇಗೌಡರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ವರದಿ ; ಬಿ ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ..

error: