December 19, 2024

Bhavana Tv

Its Your Channel

ಒಕ್ಕಲಿಗರ ಸಂಘದ ಆಶ್ರಯದಲ್ಲಿ ಅಗಲಿದ ಜಿ ಮಾದೇಗೌಡರಿಗೆ ಶ್ರದ್ಧಾಂಜಲಿ.

ಮಳವಳ್ಳಿ : ಇತ್ತೀಚೆಗೆ ಅಗಲಿದ ನಾಡಿನ ಹಿರಿಯ ಚೇತನ, ಮಂಡ್ಯ ಜಿಲ್ಲೆಯ ಅಗ್ರಗಣ್ಯ ನಾಯಕರು, ಕಾವೇರಿ ಹಿತರಕ್ಷಣಾ ಹೋರಾಟ ಸನಿತಿ ಅಧ್ಯಕ್ಷರೂ ಆದ ಜಿ ಮಾದೇಗೌಡರಿಗೆ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವೊಂದು ಪಟ್ಟಣದ ಒಕ್ಕಲಿಗರ ಸಂಘದ ಕಚೇರಿ ಆವರಣದಲ್ಲಿ ಜರುಗಿತು.
ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖಂಡರು ಮಾದೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಜೊತೆಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿ ಪಂ ಸದಸ್ಯರಾದ ಹಾಡ್ಲಿ ತಮ್ಮಯ್ಯ, ಚೌಡಯ್ಯ, ಸುಜಾತ ಕೆ ಎಂ ಪುಟ್ಟು, ಪುರಸಭಾ ಉಪಾಧ್ಯಕ್ಷ ನಂದಕುಮಾರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಎನ್ ಮಹೇಶ್ ಕುಮಾರ್ ಮತ್ತಿತರು
ತಾಲ್ಲೂಕು ಬೋರ್ಡ್ ಸದಸ್ಯ ರಾಗಿ ಆರಂಭವಾದ ರಾಜಕೀಯ ಜೀವನ ಶಾಸಕರಾಗಿ, ಸಚಿವ ರಾಗಿ, ಸಂಸದರಾಗಿ ದಕ್ಷ ಆಡಳಿತ ನಡೆಸಿದ್ದಲ್ಲದೆ, ವರುಣಾ ನಾಲೆ, ಕಾವೇರಿ ವಿಚಾರದಲ್ಲಿ ನಡೆಸಿದ ಹೋರಾಟ ಅವಿಸ್ಮರಣೀಯ ಎಂದು ಸ್ಮರಿಸಿದರು.
ಭಾರತೀ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದ ಜನರಿಗೆ ಅತ್ಯುನ್ನತ ಶಿಕ್ಷಣ ದೊರಕುವಂತೆ ಮಾಡಿದ್ದರ ಜೊತೆಗೆ ಹನುಮಂತ ನಗರದಲ್ಲಿ ಆತ್ಮಲಿಂಗೇಶ್ವರ ದೇವಾಲಯ ನಿರ್ಮಿಸಿ ಅದನ್ನು ಪ್ರವಾಸಿ ತಾಣವಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಮಾಜಿ ಪುರಸಭಾಧ್ಯಕ್ಷ ಎಂ ಎ ಚಿಕ್ಕರಾಜು ಮಾತನಾಡಿ ಜಿ ಮಾದೇಗೌಡರು ಜಿಲ್ಲೆಗೆ ಸಲ್ಲಿಸಿದ ಅವಿಸ್ಮರಣೀಯ ಸೇವೆಯನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಾಗೂ ಮದ್ದೂರಿನ ಸತ್ಯಾಗ್ರಹ ಸೌಧದ ಆವರಣದಲ್ಲಿ ಅವರ ಪ್ರತಿಮೆ ಸ್ಥಾಪನೆ ಜೊತೆಗೆ ಮಳವಳ್ಳಿ ಪಟ್ಟಣದ ಯಾವುದಾದರೂ ಬಡಾವಣೆಗೆ ಮಾದೇಗೌಡರ ಹೆಸರು ಇಡುವಂತೆ ಸಲಹೆ ನೀಡಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ ಎಂ ನಾಗೇಶ್, ಹಾಗೂ ಪದಾಧಿಕಾರಿಗಳು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ಬಿ ಮಲ್ಲಿಕಾರ್ಜುನಸ್ವಾಮಿ, ಮಳವಳ್ಳಿ.
ಮಂಡ್ಯ

error: