December 22, 2024

Bhavana Tv

Its Your Channel

ಆಗಸ್ಟ್ ೧೪ ರಂದು ಬೃಹತ್ ಲೋಕ್ ಅದಾಲತ್

ಮಳವಳ್ಳಿ : ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯಾರ್ಥ ಪಡಿಸಿ ಕೊಳ್ಳುವ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮ ವೊಂದನ್ನು ತಾಲ್ಲೂಕು ಕಾನೂನು ನೆರವು ಸಮಿತಿ ವತಿಯಿಂದ ಬರುವ ಆಗಸ್ಟ್ ೧೪ ರಂದು ಆಯೋಜಿಸ ಲಾಗಿದೆ.
ಜೆ.ಎಂ. ಸಿ ನ್ಯಾಯಲಯದ ಆವರಣದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಾದೇಶ ಅವರು ಅಂದು ರಾಷ್ಟ್ರೀಯ ಲೋಕ್ ಅದಾಲತ್ ದಿನವನ್ನಾಗಿ ಆಚರಿಸುತ್ತಿದ್ದು ಇದರ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಈ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯಾರ್ಥ ಪಡಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ವಕೀಲರು ಕಕ್ಷಿದಾರರು ಸಹಕರಿಸಬೇಕೆಂದು ಕೋರಿದರು .
ಮೋಟಾರ್ ಕಾಯ್ದೆ ಪ್ರಕರಣ, ಬ್ಯಾಂಕ್ ಸಾಲ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ಇನ್ನೂ ಹಲವು ಪ್ರಕರಣಗಳನ್ನು ಈ ಲೋಕ್ ಅದಾಲತ್‌ನಲ್ಲಿ ರಾಜಿ ಮೂಲಕ ಇತ್ಯಾರ್ಥ ಪಡಿಸಿ ಕೊಳ್ಳಬಹುದಾಗಿದ್ದು ಇದರಿಂದ ಕಕ್ಷಿದಾರರಿಗೆ, ಹಣ ಕಾಲ, ಶ್ರಮ ಎಲ್ಲವೂ ಉಳಿಯುವುದರ ಜೊತೆಗೆ ಶೀಘ್ರವಾಗಿ ನ್ಯಾಯ ದೊರಕುವದೇ ಅಲ್ಲದೇ ನ್ಯಾಯಾಲಯಕ್ಕೆ ಸುದೀರ್ಘ ಕಾಲ ಅಲೆಯುವುದು ತಪ್ಪುತ್ತದೆ ಮುಖ್ಯವಾಗಿ ಅದಾಲತ್‌ನಲ್ಲಿ ಇತ್ಯಾರ್ಥವಾದ ಪ್ರಕರಣಗಳಲ್ಲಿ ಕಕ್ಷಿದಾರ ನ್ಯಾಯಾಲಯಕ್ಕೆ ಕಟ್ಟಿದ್ದ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ ಎಂದು ವಿವರಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜರೀಬಾ ಭಾನು ಅವರು ಮಾತನಾಡಿ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದ ಕಲಾಪಗಳು ಸರಿಯಾಗಿ ನಡೆಯದೆ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿದ್ದು ಕಕ್ಷಿದಾರರು ಈ ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯಾರ್ಥ ಪಡಿಸಿಕೊಂಡಲ್ಲಿ ಶೀಘ್ರ ನ್ಯಾಯ ದೊರೆತು ನ್ಯಾಯಾಲಯದ ಒತ್ತಡ ಸಹ ಕಡಿಮೆಯಾಗಲಿದೆ ಎಂದರು.
ಕೇಸ್ ನಡೆಸಿದರೆ ಒಬ್ಬರು ಮಾತ್ರ ಗೆಲ್ಲುತ್ತಾರೆ, ರಾಜಿಯಾ ದರೆ ಇಬ್ಬರೂ ಗೆಲ್ಲುತ್ತಾರೆ ಎಂದು ಹೇಳಿದ ಅವರು ಈ ಅದಾಲತ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯಾರ್ಥ ಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ, ವಕೀಲರ ಸಂಘದ ಅಧ್ಯಕ್ಷ ಎನ್ ಎಂ ಮಲ್ಲೇಶ್, ಸೇರಿದಂತೆ ಹಲವಾರು ವಕೀಲರು ಗೋಷ್ಠಿಯಲ್ಲಿ ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: