ಮಳವಳ್ಳಿ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಇಂದು ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷರಾದ ಯಮದೂರು ಸಿದ್ದರಾಜು ನೇತೃತ್ವದಲ್ಲಿ ಇಲ್ಲಿನ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗ ಸೇರಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಿರ್ಗಮಿತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರ ಘೋಷಣೆಗಳನ್ನು ಮೊಳಗಿಸಿದರಲ್ಲದೆ ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಮದೂರು ಸಿದ್ದರಾಜು ಅವರು ರಾಜಕೀಯ ಅನುಭವದ ಜೊತೆಗೆ ಸಹನೆ ತಾಳ್ಮೆಯ ಗುಣಗವುಳ್ಳ ಉತ್ತಮ ನಾಯಕತ್ವದ ಮುಖ್ಯಮಂತ್ರಿ ಯೊಬ್ಬರನ್ನು ಯಡಿಯೂರಪ್ಪ ಅವರು ಈ ರಾಜ್ಯಕ್ಕೆ ನೀಡಿದ್ದು ಆ ಮೂಲಕ ಪಕ್ಷದಲ್ಲಿ ಸಣ್ಣ ಗೊಂದಲಕ್ಕೂ ಅವಕಾಶವಿಲ್ಲ ದಂತೆ ನೂತನ ಮುಖ್ಯಮಂತ್ರಿ ಅವರನ್ನು ಆಯ್ಕೆ ಮಾಡಿರುವುದು ಯಡಿಯೂರಪ್ಪ ಅವರ ರಾಜಕೀಯ ಮುತ್ಸದ್ದಿ ತನಕ್ಕೆ ಸಾಕ್ಷಿಯಾಗಿದೆ ಎಂದರು.
ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿರುವ ಬಸವರಾಜ್ ಬೊಮ್ಮಾಯಿ ಅವರು ರೈತರ, ಬಡವರ ದೀನ ದಲಿತರ ಪರವಾದ ಉತ್ತಮ ಆಡಳಿತ ವನ್ನು ನೀಡುವರು ಎಂಬ ವಿಶ್ವಾಸ ವನ್ನು ವೈ ಎಸ್ ಸಿದ್ದರಾಜು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿ ಜೆ ಪಿ ಮುಖಂಡರೂ ಪಿ ಎಲ್ ಡಿ ಬ್ಯಾಂಕ್ ನಿರ್ಧೇಶಕ ರಾದ ಅಪ್ಪಾಜಿಗೌಡ, ಪುರಸಭಾ ಸದಸ್ಯರಾದ ಶಿವಲಿಂಗೇಗೌಡ, ವೇದಾವತಿ, ರಾಮಣ್ಣ, ಡಾ. ಕೆ ಶ್ರೀಧರ್, ಡಾ. ಕಪನೀಗೌಡ, ಬಸವಲಿಂಗಪ್ಪ ಮತ್ತಿತರರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ವರದಿ: ಮಲ್ಲಿಕಾರ್ಜುನ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ