December 21, 2024

Bhavana Tv

Its Your Channel

ಒಕ್ಕರಹಳ್ಳಿ ಗ್ರಾಮದಲ್ಲಿ ಕಂಡಾಯಗಳ ಮೆರವಣಿಗೆ

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಒಕ್ಕರಹಳ್ಳಿ ಗ್ರಾಮದಲ್ಲಿ ಶ್ರೀ ಮಂಟೇಸ್ವಾಮಿ ಹಾಗೂ ಶ್ರೀ ಸಿದ್ದಪ್ಪಾಜಿ, ಶ್ರೀ ರಾಚಪ್ಪಾಜಿ, ಶ್ರೀದೊಡ್ಡಮ್ಮ ತಾಯಿ, ಶ್ರೀ ಚೆನ್ನಾಜಮ್ಮ ಕಂಡಾಯಗಳ ಮೆರವಣಿಗೆ ಬುಧವಾರ ಸಾಯಂಕಾಲ ಸಡಗರ ಸಂಭ್ರಮದಿAದ ಜರುಗಿತು.
ಕೊಳ್ಳೇಗಾಲ ಸಮೀಪದ ಕುರುಬನ ಕಟ್ಟೆಯಿಂದ ನಿನ್ನೆ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ ಕಂಡಾಯ ಗಳಿಗೆ ಗ್ರಾಮಸ್ಥರು ಭಕ್ತಿ ಗೌರವಗಳೊಂದಿಗೆ ಭವ್ಯ ಸ್ವಾಗತ ಕೋರಿದರು.
ನಂತರ ಗ್ರಾಮದ ಹೊರವಲಯದ ಹರಳಿ ಕಟ್ಟೆ ಬಳಿ ಹೂವು ಹೊಂಬಾಳಿ ಅಲಂಕಾರ ಮಾಡಿ ವಿಶೇಷ ಪೂಜೆ ನೈವೇದ್ಯಗಳನ್ನು ನೀಡಿದ ನಂತರ ಗ್ರಾಮದ ಎಲ್ಲಾ ಬೀದಿಗಳಲ್ಲೂ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಪ್ರತೀ ಮನೆಯ ಮುಂದೆ ತಳಿರು ತೋರಣಗಳ ಜೊತೆಗೆ ಗೃಹಿಣಿಯರು ಬಗೆ ಬಗೆಯ ರಂಗೋಲಿ ಚಿತ್ತಾರ ಮೂಡಿಸಿದ್ದರಲ್ಲದೆ ತಮ್ಮ ತಮ್ಮ ಮನೆ ಮುಂದೆ ಕಂಡಾಯಗಳು ಬಂದಾಗ ಪೂಜೆ ನೈವೇದ್ಯ ನೀಡುವುದರೊಂದಿಗೆ ತಮ್ಮ ಭಕ್ತಿ ಸಮರ್ಪಿಸಿದರು.
ಗ್ರಾಮದ ಯಜಮಾನರು ಗಳಾದ ಷಣ್ಮುಖಪ್ಪ, ಮರಿಯಪ್ಪ, ಮಹಾದೇವಯ್ಯ, ಪುಟ್ಟರಾಚಯ್ಯ ಮಹಾದೇವು, ಜಯರಾಜು, ನಾಗರಾಜಸ್ವಾಮಿ, ಬಸವರಾಜು, ಬೋರಯ್ಯ, ಚಿಕ್ಕ ಮಲ್ಲಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: