December 22, 2024

Bhavana Tv

Its Your Channel

ಮಳವಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ

ಮಳವಳ್ಳಿ : ಮಳವಳ್ಳಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ತಾಲ್ಲೂಕು ದಂಡಾಧಿಕಾರಿಗಳಾದ ವಿಜಯಣ್ಣ ಅವರು ಹಲವಾರು ದಶಕಗಳ ಕಾಲದಿಂದ ಜನರ ದನಿಯಾಗಿರುವ ಪತ್ರಿಕಾ ಮಾಧ್ಯಮ ಜನರಿಗೆ ಹತ್ತಿರವಾದ ಮಾಧ್ಯಮ ಎಂದು ಪ್ರಶಂಸಿಸಿದರು.
ಕಳೆದ ೨-೩ ದಶಕಗಳಿಂದ ದೃಶ್ಯ ಮಾಧ್ಯಮ ಅತಿ ಹೆಚ್ಚಿನ ಸದ್ದು ಮಾಡುತ್ತಿದ್ದರೂ ನಿಖರ ಹಾಗೂ ಸ್ಪಷ್ಟತೆ ಯನ್ನು ಉಳಿಸಿಕೊಂಡಿರುವ ವಿಶ್ವಾಸಾರ್ಹ ಮಾಧ್ಯಮ ಎಂದರೆ ಅದು ಪತ್ರಿಕಾ ಮಾಧ್ಯಮ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ಮಾತನಾಡಿ ಯಾವುದೇ ಒತ್ತಡಗಳಿಗೆ ಮಣಿಯದೆ ಪತ್ರಕರ್ತರು ಸಮಾಜದಲ್ಲಿನ ನ್ಯೂನತೆಯನ್ನು ಜನರ ಮುಂದಿಡಬೇಕು ಎಂದರು.
ಸಮಾಜ ಸೇವಕ ವೇದಮೂರ್ತಿ ಮಾತನಾಡಿ ಸಾಮಾಜಿಕ ಜಾಲತಾಣದಿಂದ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಗಟ್ಟಲು ಪತ್ರಿಕಾ ಮಾಧ್ಯಮಗಳು ಮುಂದಾಗಬೇಕೆAದು ಕೋರಿದರು.
ಈ ಸಂದರ್ಭದಲ್ಲಿ ಬಿಇಓ ಚಿನ್ನಸ್ವಾಮಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಒಕ್ಕರಹಳ್ಳಿ ಜಯರಾಜು, ಜಿಲ್ಲಾ ನಿರ್ಧೇಶಕ ಉಮೇಶ್ ಮಾಳಿಗ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತಿತರರು ಪಾಲ್ಗೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲ್ಲೂಕು ಅಧ್ಯಕ್ಷರಾದ ಡಾ ಸಿ ನಾಗರಾಜು ವಹಿಸಿದ್ದರು.

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: