ಮಳವಳ್ಳಿ : ಮಳವಳ್ಳಿ ಕ್ಷೇತ್ರದ ಶಾಸಕರಾದ ಡಾ ಕೆ ಅನ್ನದಾನಿ ಅವರಿಗೆ ಕರೋನ ಸೋಂಕು ತಗುಲಿದ್ದು ಈ ಹಿನ್ನೆಲೆಯಲ್ಲಿ ನೆನ್ನೆ ಮಧ್ಯಾಹ್ನ ತಮ್ಮೆಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಹಠಾತ್ ರದ್ದುಗೊಳಿಸಿರುವ ಶಾಸಕರು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಮೂರ್ನಾಲ್ಕು ದಿನದಿಂದ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ನೀಡಿದ್ದರು.
ಈ ನಡುವೆಯೂ ನೆನ್ನೆ ಗುರುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಹಾಗೂ ಟಿ ಕಾಗೇಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರು ಮಾರಗೌಡನ ಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಆಸ್ಪತ್ರೆ ಕಟ್ಟಡದ ಉದ್ಘಾಟಿಸಬೇಕಾಗಿತ್ತಾದರೂ ಅಷ್ಟು ಹೊತ್ತಿಗೆ ಅವರಿಗೆ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಎಂಬ ಮಾಹಿತಿ ಬಂದ ಕೂಡಲೇ ಕಾರ್ಯಕ್ರಮ ವನ್ನು ರದ್ದುಗೊಳಿಸಿ ಬೆಂಗಳೂರಿಗೆ ತೆರಳಿದರು.
ಸದ್ಯ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಶಾಸಕ ಡಾ ಕೆ ಅನ್ನದಾನಿ ಅವರಿಗೆ ಕರೋನ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪಟ್ಟಣದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಮುಖಂಡರು ಶಾಸಕರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ ಅವರುಗಳು ತಾಲೂಕಿನಲ್ಲಿ ಕೋವಿಡ್ ಅಲೆ ಆರಂಭವಾಗಿ ಸಾವಿರಾರು ಜನ ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ ಗಳನ್ನು ಸೇರಿದ್ದ ವೇಳೆ ಅವರ ಜೀವ ರಕ್ಷಣೆಗಾಗಿ ಹಗಲಿರುಳು ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ ಶಾಸಕರಿಗೆ ಕೊನೆಗೂ ಕೋವಿಡ್ ಸೋಂಕು ತಗುಲಿರು ವುದು ಅತ್ಯಂತ ನೋವಿನ ಸಂಗತಿ ಯಾಗಿದ್ದು ಆದಷ್ಟು ಬೇಗ ಗುಣಮುಖ ರಾಗಿ ಕ್ಷೇತ್ರದ ಜನರ ಸೇವೆಗೆ ಮರಳುವಂತಾಗಲಿ ಎಂದು ಹಾರಿಸಿದರು.
ಪುರಸಭಾ ಸದಸ್ಯರಾದ ಪ್ರಶಾಂತ್, ನೂರುಲ್ಲಾ, ಪುಟ್ಟಸ್ವಾಮಿ, ಕುಮಾರ್, ಪ್ರಮೀಳಾ, ಮುಖಂಡರಾದ ನಾರಾಯಣ, ಅಂಕನಾಥ್, ಡಾ. ಕೃಷ್ಣೇಗೌಡ, ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ