December 21, 2024

Bhavana Tv

Its Your Channel

ಕನಾ೯ಟಕ ದಲಿತ ಚಳುವಳಿ ನವ ನಿಮಾ೯ಣ ವೇದಿಕೆ ವತಿಯಿಂದ ಎಂ. ಕೆಂಪಯ್ಯ ಹಾಗೂ ಹೊಂಬಯ್ಯರವರ ಶ್ರದ್ದಾಂಜಲಿ ಸಭೆ

ಮಳವಳ್ಳಿ : ಕನಾ೯ಟಕ ದಲಿತ ಚಳುವಳಿ ನವ ನಿಮಾ೯ಣ ವೇದಿಕೆ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷರಾದ ಎಂ. ಕೆಂಪಯ್ಯ ಹಾಗೂ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಹೊಂಬಯ್ಯ ಅವರ ಶ್ರದ್ದಾಂಜಲಿ ಸಭೆಯೂ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ ಎನ್ ಜಯರಾಜು ಮಾತನಾಡಿ, ದಲಿತರ ವರ್ಗದ ನಾಯಕರಾಗಿದ್ದ ಕೆಂಪಯ್ಯ ಅವರು ಸಮುದಾಯದ ಜನರ ಬಗ್ಗೆ ಅಪಾರ ಪ್ರೀತಿ ಕಾಳಜಿ ಹೊಂದಿದ್ದರು. ಜೊತೆಗೆ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಹೊಂಬಯ್ಯ ನವರು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದರೂ ಮುಂದೆ ನಿಂತು ನ್ಯಾಯ ಪಂಚಾಯಿತಿ ಮಾಡಿ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಇವರಿಬ್ಬರ ಅಗಲಿಕೆ ದಲಿತ ಸಮುದಾಯಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ವಿಷಾದಿಸಿದರು.
ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ದಲಿತ ಸಮುದಾಯಕ್ಕಾಗಿ ದುಡಿದ ಮಹಾನೀಯರನ್ನು ಸ್ಮರಣೆ ಮಾಡುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ, ಅಂಬೇಡ್ಕರ್‌ರವರು ಕೊಟ್ಟ ಮೀಸಲಾತಿಯಡಿಯಲ್ಲಿ ಉದ್ಯೋಗ ಪಡೆದವರು ತಮ್ಮ ಸಮುದಾಯವನ್ನು ಮರೆಯುತ್ತಿದ್ಧಾರೆ. ಹಲವಾರು ಹುದ್ದೆಗಳಲ್ಲಿ ಇರುವ ಅಧಿಕಾರಿಗಳು ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಗೋವಿಂದಯ್ಯ, , ಸಂಭವಯ್ಯ, ಮಂಚಯ್ಯ, ಚಂದ್ರಹಾಸ್, ರಂಗಸ್ವಾಮಿ, ಜಯರಾಜು, ಚೇತನ್ ಕುಮಾರ್,ಭರತ್‌ರಾಜ್ ಸೇರಿದಂತೆ ಇತರರು ಇದ್ದರು

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: