December 21, 2024

Bhavana Tv

Its Your Channel

ಅಕ್ರಮ ಜೂಜಾಟದ ಅಡ್ಡೆಯ ಮೇಲೆ ಪೋಲಿಸರ ದಾಳಿ ೧೧ ಮಂದಿ ಬಂಧನ

ಮಳವಳ್ಳಿ : ಪ್ರಸಿದ್ಧ ಯಾತ್ರಾಸ್ಥಳ ವಾದ ಮುತ್ತತ್ತಿಯಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಗುಂಪೊAದರ ಮೇಲೆ ದಾಳಿ ನಡೆಸಿರುವ ಪೊಲೀಸರು ೧೧ ಮಂದಿಯನ್ನು ಬಂಧಿಸಿದ್ದಾರೆ.
ನೆನ್ನೆ ರಾತ್ರಿ ೮ ಗಂಟೆ ಸಮಯದಲ್ಲಿ ಮುತ್ತತ್ತಿಯ ಶ್ರೀ ಮುತ್ತೆತ್ತರಾಯ ದೇವಸ್ಥಾನದ ಆವರಣದ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಗುಂಪೊAದು ಅಕ್ರಮವಾಗಿ ಜೂಜಾಟದಲ್ಲಿ ತೊಡಗಿತ್ತು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದು ಡಿ ವೈ ಎಸ್ ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ಅವರ ಮಾರ್ಗದರ್ಶನದಂತೆ ದಾಳಿ ನಡೆಸಿದ ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್ ನೇತೃತ್ವದ ಪೊಲೀಸ್ ತಂಡ ೧೧ ಮಂದಿ ಜೂಜು ಕೋರರನ್ನು ಬಂಧಿಸಿ ಫಣವಾಗಿಟ್ಟಿದ್ದ ೧ಲಕ್ಷದ ೨೭ ಸಾವಿರ ರೂಗಳನ್ನು ವಶಪಡಿಸಿಕೊಂಡಿದ್ದಾರೆ,
ಬಂಧಿತರ ವಿರುದ್ದ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: