ಮಳವಳ್ಳಿ ; ಮಳವಳ್ಳಿ ಪುರಸಭಾ ಸದಸ್ಯ ನೂರುಲ್ಲಾ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವು ಮಳವಳ್ಳಿ ಪಟ್ಟಣದ ಶ್ರೀ ಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಸರಳವಾಗಿ ಜರುಗಿತು.
ಕ್ಷೇತ್ರದ ಶಾಸಕರು ಹಾಗೂ ನಮ್ಮ ನಾಯಕರೂ ಅದ ಡಾ ಕೆ ಅನ್ನದಾನಿ ಅವರು ಕೋವಿಡ್ ಸೋಂಕಿನಿAದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಾನು ಈ ಭಾರಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ ಎಂದು ನೂರುಲ್ಲಾ ಅವರು ನಿರ್ಧರಿಸಿದ್ದರಾದರೂ ಅವರ ಸಹಪಾಠಿ ಸದಸ್ಯರು ಹಾಗೂ ಆತ್ಮೀಯರು ಒತ್ತಾಯ ಪೂರ್ವಕವಾಗಿ ಅವರ. ಹುಟ್ಟು ಹಬ್ಬವನ್ನು ದೇವಾಲಯದ ಮುಂಭಾಗ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ಅವರು ಸರಳ ಸಜ್ಜನಿಕೆ ಜೊತೆಗೆ ಸ್ನೇಹ ಜೀವಿಯಾದ ನೂರುಲ್ಲಾ ಅವರು ಅರೋಗ್ಯವಂತರಾಗಿ ನೂರು ಕಾಲ ಬಾಳುವಂತೆ ದೇವರು ಆಶೀರ್ವಾದಿಸಲಿ ಎಂದು ಹಾರೈಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಮುಖಂಡರಾದ ಕಲ್ಕುಣಿ ನಂಜುAಡಸ್ವಾಮಿ, ನಾರಾಯಣ, ನಾಗರಾಜು, ಅಂಕನಾಥ್, ದುಗ್ಗನಹಳ್ಳಿ ನಾಗರಾಜು, ಸದಸ್ಯರಾದ ಸಿದ್ದರಾಜು, ಪ್ರಶಾಂತ್, ಪ್ರಮೀಳಾ, ಮತ್ತಿತರರು ಹಾಜರಿದ್ದರು.
ವರದಿ: ಮಲ್ಲಿಕಾರ್ಜೂನ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ