ಮಳವಳ್ಳಿ : ವ್ಯಕ್ತಿಯೊಬ್ಬನನ್ನು ಲಾಂಗ್ ಮಚ್ಚಿನಿಂದ ಕೊಚ್ಚಿ ಬರ್ಭರವಾಗಿ ಕೊಲೆ ಮಾಡಿರುವ ದುಷ್ಕೃತ್ಯವೊಂದು ತಾಲ್ಲೂಕಿನ ಅಟ್ಟುವನಹಳ್ಳಿ ಗೇಟ್ ಬಳಿ ಜರುಗಿದೆ.
ಮೂಲತಃ ಕನಕಪುರ ತಾಲ್ಲೂಕು ಕೂನೂರು ಗ್ರಾಮದ ವಾಸಿ ನಟರಾಜು ಎಂಬುವರ ಮಗನಾದ ನಾಗೇಂದ್ರ ಎಂಬಾತನೇ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸುಮಾರು ೩೭ ವರ್ಷ ವಯಸ್ಸಿನ ಈತನನ್ನು ನೆನ್ನೆ ರಾತ್ರಿ ಅಟ್ಟುವನಹಳ್ಳಿ ಬಳಿಯ ಮಹಾದೇವಸ್ವಾಮಿ ಎಂಬುವರ ಜಮೀನಿನಲ್ಲಿ ಲಾಂಗು ಮಚ್ಚುಗ ಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಕೊಲೆಗೀಡಾಗಿರುವ ನಾಗೇಂದ್ರ ಖಾಸಗಿ ಶಾಲೆಯೊಂದರ ಶಿಕ್ಷಕನಾಗಿದ್ದನಾದರೂ ಇತ್ತೀಚೆಗೆ ಆತನನ್ನು ಶಾಲೆಯ ಆಡಳಿತ ಮಂಡಳಿ ಕೆಲಸದಿಂದ ತೆಗೆದು ಹಾಕಿತ್ತು ಎಂದು ಗೊತ್ತಾಗಿದೆ.
ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ಸಿಪಿಐ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ