December 22, 2024

Bhavana Tv

Its Your Channel

ತಾಲೂಕಿನ ಆರೋಗ್ಯ ಇಲಾಖೆಯ ಕಿರಿಯ ತಾಂತ್ರಿಕ ಅಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

ಮಳವಳ್ಳಿ: ಮದ್ದೂರು ನಿವೃತ್ತ ಶಿಕ್ಷಕ ಕೆ ಮಾಯಿಗಶೆಟ್ಟಿ ಸೇವಾ ಸಮಿತಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಸ್ಥಾನ ಪ್ರವಾಸಿ ತಾಣ ಮಂಡ್ಯ ಪತ್ರಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವೈದ್ಯರ ದಿನಾಚರಣೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಅಂಗವಾಗಿ ಮದ್ದೂರು ತಾಲೂಕಿನ ಆರೋಗ್ಯ ಇಲಾಖೆಯ ಕಿರಿಯ ತಾಂತ್ರಿಕ ಅಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಗುರುಶಾಂತಪ್ಪ ಸಾರ್ವಜನಿಕರ ಆಸ್ಪತ್ರೆ ಆವರಣ ಮದ್ದೂರಲ್ಲಿ ನಡೆಯಿತು ಕಾರ್ಯಕ್ರಮವನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಎಂ ಲೋಕೇಶ ಮಂಡ್ಯ ಜಿಲ್ಲೆಯಾದ್ಯಂತ ಕೋವಿಡ್ ವಾರಿಯರ್ಸ್ಗಳನ್ನು ಜಿಲ್ಲಾದ್ಯಂತ ಅಭಿನಂದಿಸಲಾಗುತ್ತಿದ್ದು ಅದರಂತೆ ಮದ್ದೂರು ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎರಡನೇ ಅಲೆಯಲ್ಲಿ ತಾವೆಲ್ಲ ತಮ್ಮ ಪ್ರಾಣದ ಭಯವನ್ನು ತೊರೆದು ಉತ್ತಮ ಸೇವೆ ಸಲ್ಲಿಸಿರುವುದಕ್ಕೆ ತಮ್ಮನ್ನ ಅಭಿನಂದಿಸುವುದು ಸಂಘ ಸಂಸ್ಥೆಗಳ ಕರ್ತವ್ಯ ವಾಗಿರುತ್ತದೆ ಮತ್ತು ತಮ್ಮ ಸೇವೆ ಯನ್ನು ಪ್ರೋತ್ಸಾಹಿಸಿದರೆ ಮತ್ತಷ್ಟು ಉತ್ತಮವಾದ ಕೆಲಸ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಆದರಿಂದ ಎಲ್ಲಾ ವರ್ಗದ ಕೋವಿಡ್ ವಾರಿಯರ್ಸ್ಗಳನ್ನು ಅಭಿನಂಧಿಸಲಾಗುತ್ತಿದೆ ಎಲ್ಲರಿಗೂ ಶುಭವಾಗಲಿ ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂಎಸ್ ರಘುನಂದನ್ ವಕೀಲರು ಮನ್ಮುಲ್ ಉಪಧ್ಯಕ್ಷರುಕೋವಿಡ್ ವೈರಸ್ಸು ಇಡೀ ದೇಶವನ್ನು ಕಾಡುತ್ತಿದೆ ಅದರಲ್ಲೂ ಮದ್ದೂರಿನಲ್ಲಿ ಆರೋಗ್ಯ ಇಲಾಖೆಯು ಮತ್ತು ವಾರಿಯರ್ಸ್ಗಳು ಹಗಲು-ರಾತ್ರಿಯೆನ್ನದೆ ಪ್ರಾಮಾಣಿಕವಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಕರ್ತವ್ಯನಿರ್ವಹಿಸುತ್ತಿವೆ. ತಮ್ಮಗಳನ್ನು ಸಂಘ-ಸAಸ್ಥೆಗಳು ಅಭಿನಂದಿಸುತ್ತರುವAತದ್ದು ಸಂತೋಷದ ಸಂಗತಿ ಅದೇ ರೀತಿ ನಮ್ಮ ಸಂಸ್ಥೆ ವತಿಯಿಂದ ಸಹ ಹಲವಾರು ಸೇವಾ ಕಾರ್ಯಕ್ರಮವನ್ನು ಮಾಡಿದ್ದು ಅದರಂತೆ ಸಂಘ ಸಂಸ್ಥೆಗಳು ಸಹ ಉತ್ತಮ ಕೆಲಸ ಮಾಡುತ್ತಿದೆ ಮತ್ತು ಮೂರನೇ ಅಲೆಗೆ ಇನ್ನಷ್ಟು ಒಳ್ಳೆ ಕೆಲಸ ಮಾಡಿ ಎಂದು ಸಲಹೆ ನೀಡಿದರು ನಂತರ ಮದ್ದೂರು ತಾಲೂಕು ತಹಶೀಲ್ದಾರ್ ನರಸಿಂಹಮೂರ್ತಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ತಮ್ಮ ಸೇವೆ ಅಮೂಲ್ಯವಾದದ್ದು ಅದರಂತೆ ಇನ್ನು ಮುಂದೆ ಮೂರನೇ ಅಲೆಗೆ ಎಲ್ಲರೂ ಸಿದ್ದರಾಗಿ ಕೋರೋನಾ ವೈರಸ್‌ನ್ನು ನಿರ್ಮೂಲ ಮಾಡಲು ಎಲ್ಲರೂ ಸಜ್ಜಾಗಿರಿ ತಮ್ಮ ಜವಾಬ್ದಾರಿಯನ್ನು ಗುರುತಿಸಿ ಅಭಿನಂದಿಸು ತಿರುವುದು ಉತ್ತಮವಾದ ಕೆಲಸವಾಗಿದ್ದು ಇನ್ನಷ್ಟು ಜಾಗೃತರಾಗಿರಬೇಕೆಂದು ತಿಳಿಸಿ. ಕೋವಿಡ್ ನಿಯಮಾವಳಿ ಪ್ರಕಾರ
ಇತಿಮಿತಿಯಾದ ಸರ್ಕಾರದ ನಿಯಮದಂತೆ ೩೦ ಜನ ಒಳಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉತ್ತಮ ಎಂದು ಕಾರ್ಯಕ್ರಮದ ಬಗ್ಗೆ ಬಣ್ಣಿಸಿದರು ನಂತರ ಎಲ್ಲರಿಗೂ ಅಭಿನಂದಿಸಿದರು
ಡಾಕ್ಟರ್ ನಾಗೇಂದ್ರ ಮಾತನಾಡಿ ರೋಗಗಳನ್ನು ಗುಣಪಡಿಸಲು ತಮ್ಮ ಕರ್ತವ್ಯ ಬಹಳ ಮುಖ್ಯವಾಗಿದೆ ಹಾಗಾಗಿ ಒಮ್ಮೊಮ್ಮೆ ತಂದೆ-ತಾಯಿ ಸಂಸಾರವನ್ನು ಸಹ ಲೆಕ್ಕಿಸದೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ತಮ್ಮನ್ನು ಗುರುತಿಸಿ ಅಭಿನಂದನೆ ಸಲ್ಲಿಸುತ್ತಿರುವುದು ಬಹಳ ಶ್ಲಾಘನೀಯ ಎಂದು ಹೇಳೀದರು.
ಬೋರಯ್ಯ ಸ್ವಾಮಿ ಮಾತನಾಡಿ ವೈದ್ಯರುಗಳು ತಮ್ಮ ಕರ್ತವ್ಯವನ್ನು ಬಹಳ ನಿಷ್ಠೆಯಿಂದ ಮಾಡಿದ್ದಾರೆ ನಾವು ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕೋವಿಡ್ ಸಂದರ್ಭದಲ್ಲಿ ಇಂಥ ಕಡೆ ಅಡಚಣೆಯಿದೆ ಎಂದು ತಿಳಿಸಿದಂತ ಸಂದರ್ಭದಲ್ಲಿ ತಕ್ಷಣದಲ್ಲಿ ಅಲ್ಲಿನ ಅಡಚಣೆಗಳನ್ನು ನಿವಾರಣೆ ಮಾಡಲು ಮದ್ದೂರು ತಾಲೂಕು ಆರೋಗ್ಯ ಇಲಾಖೆ ಶ್ರಮಿಸಿದೆ ಎಂದರು ಅಭಿನಂದನೆ ಸ್ವೀಕರಿಸಿದ ರಾಧ ಮತ್ತು ಪ್ರಕಾಶ್ ಅವರ ಅನುಭವವನ್ನು ಹಂಚಿಕೊAಡರು ಅಧ್ಯಕ್ಷ ನುಡಿಯನ್ನು ತಾಲೂಕು ಆರೋಗ್ಯ ಅಧಿಕಾರಿ ಆಶಾಲತಾ ಮಾತನಾಡಿ ನಾನು ನೋಡಿದ ಮಟ್ಟಿಗೆ ೨೫ ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ಸ್ ಎಚ್ ಐವಿ ಪರೀಕ್ಷಿಸಲು ಪ್ರಯೋಗಶಾಲೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ ಟಿ ಸಿ ಗಳಿದ್ದರೂ ವೈದ್ಯರಿಗಿಂತ ಮುಖ್ಯವಾಗಿ ಕಿರಿಯ ತಾಂತ್ರಿಕ ಟೆಕ್ನಿಷಿಯನ್ ಅಧಿಕಾರಿಗಳ ಕರ್ತವ್ಯ ಮುಖ್ಯವಾಗಿದೆ ಎಂದುರು ಮತ್ತು ಸೂಪ್ಟಮ್ ಸಹ ಪರೀಕ್ಷಿಸುತ್ತಿದ್ದರು ಎಂದರು
ಇದೇ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ರವರಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು ಇದೇ ಸಂದರ್ಭದಲ್ಲಿ ಮಣ್ಮುಲ್ ಉಪಾಧ್ಯಕ್ಷರಾದ ಎಂಎಸ್ ರಘುನಂದನ್ ರವರನ್ನು ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ನರಸಿಂಹ ಮೂರ್ತಿ ರಘುನಂದನ್ ಲೋಕೇಶ್ ಆಶಾಲತಾ ನಾಗೇಂದ್ರ ಸ್ವಾಮಿ ಹರ್ಷ ಆನಂದ್ ಶ್ರೀನಿವಾಸಗೌಡ ಮತ್ತು ಎಲ್ಲಾ ಫಲಾನುಭವಿ ವಾರಿಯರ್ಸ್ಗಳು ಹಾಜರಿದ್ದರು

ವರದಿ: ಲೊಕೇಶ ಮಳವಳ್ಳಿ

error: